Friday, 13th December 2024

ವಾರದ ಆರಂಭದಲ್ಲೇ ಎತ್ತರಕ್ಕೇರಿದ ಸೆನ್ಸೆಕ್ಸ್, ನಿಫ್ಟಿ ಪಾಯಿಂಟ್

ಮುಂಬೈ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರ ಆರಂಭದ ವಹಿವಾಟಿನಲ್ಲಿ ಎತ್ತರಕ್ಕೆ ಏರಿವೆ. ಬಿಎಸ್ ಇ ಸೆನ್ಸೆಕ್ಸ್ 49 ಸಾವಿರ ಪಾಯಿಂಟ್ ಗಳ ಗಡಿ ದಾಟಿ ಮೇಲೇರಿದರೆ, ನಿಫ್ಟಿ ಸೂಚ್ಯಂಕ 14,450 ಪಾಯಿಂಟ್ ಗಿಂತ ಎತ್ತರಕ್ಕೆ ಏರಿತು.

49,260.21 ಪಾಯಿಂಟ್ ಗಳನ್ನು ತಲುಪಿ, ಸೆನ್ಸೆಕ್ಸ್ 49,172.99 ಪಾಯಿಂಟ್ ನೊಂದಿಗೆ ಹಾಗೂ ನಿಫ್ಟಿ 14,474.05 ಪಾಯಿಂಟ್ ತಲುಪಿದ ನಂತರ, 14,449.95 ಪಾಯಿಂಟ್ ನೊಂದಿಗೆ ವ್ಯವಹಾರ ನಡೆಸುತ್ತಿತ್ತು.