Wednesday, 9th October 2024

60 ಸಾವಿರ ದಾಟಿದ ಸಂವೇದಿ ಸೂಚ್ಯಂಕ

ಮುಂಬಯಿ: ಸೋಮವಾರ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಅಲ್ಪ ಏರಿಕೆ ಯೊಂದಿಗೆ ದಿನಾಂತ್ಯದ ವಹಿವಾಟನ್ನು ಕೊನೆಗೊಳಿಸಿದೆ.

ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 29.41 ಅಂಕಗಳ ಅಲ್ಪಪ್ರಮಾಣದ ಏರಿಕೆಯೊಂದಿಗೆ 60,077.88 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಎನ್ ಎಸ್ ಇ ನಿಫ್ಟಿ 1.90 ಅಂಕಗಳ ಏರಿಕೆಯೊಂದಿಗೆ 17,855.10 ಅಂಕಗಳ ಮಟ್ಟ ತಲುಪಿದೆ.

ಸೆನ್ಸೆಕ್ಸ್, ನಿಫ್ಟಿ ಅಲ್ಪ ಏರಿಕೆಯಿಂದ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಮಹೀಂದ್ರ ಆಯಂಡ್ ಮಹೀಂದ್ರಾ, ಒಎನ್ ಜಿಸಿ, ಹೀರೋ ಮೋಟಾರ್ ಷೇರುಗಳು ಲಾಭಗಳಿಸಿದೆ.

ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 245.62 ಅಂಕಗಳ ಏರಿಕೆಯೊಂದಿಗೆ 60,339.28 ಅಂಕಗಳ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು, ಬಳಿಕ ಸ್ವಲ್ಪ ಕುಸಿತ ಕಂಡ ಸೆನ್ಸೆಕ್ಸ್ 245.62 ಅಂಕಗಳೊಂದಿಗೆ 60,294.09 ಅಂಕಗಳಲ್ಲಿ ವಹಿವಾಟು ನಡೆಸಿತ್ತು.