Wednesday, 11th December 2024

62 ಸಾವಿರ ಪಾಯಿಂಟ್ಸ್ ಗಡಿ ದಾಟಿದ ಸೆನ್ಸೆಕ್ಸ್

ಮುಂಬೈ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಹೊಸ ದಾಖಲೆಯ ಹಂತ ತಲುಪಿದೆ. ಮೊದಲ ಬಾರಿಗೆ ಸೆನ್ಸೆಕ್ಸ್ 62,000 ಪಾಯಿಂಟ್ಸ್ ಗಡಿದಾಟಿ, ನಿಫ್ಟಿ 18,600 ಪಾಯಿಂಟ್ಸ್ ಮುಟ್ಟಿತು.

ಸೆನ್ಸೆಕ್ಸ್ 264.79 ಪಾಯಿಂಟ್‌ ಏರಿಕೆಗೊಂಡು 62030.38 ಕ್ಕೆ, ನಿಫ್ಟಿ 76.50 ಪಾಯಿಂಟ್‌ ಹೆಚ್ಚಾಗಿ 18553.50 ಪಾಯಿಂಟ್ಸ್ ತಲುಪಿದೆ. ಸುಮಾರು 1178 ಷೇರುಗಳು ಏರಿಕೆಗೊಂಡರೆ, 327 ಷೇರುಗಳು ಕುಸಿದಿವೆ ಮತ್ತು 81 ಷೇರುಗಳು ಬದಲಾಗದೆ ಇವೆ. ಲಾರ್ಸೆನ್‌ನ ಷೇರುಗಳು 840.00 ರೂ. ತಲುಪಿದ್ದು 52 ರೂಪಾಯಿಗಳ ಲಾಭದೊಂದಿಗೆ ಪ್ರಾರಂಭವಾಯಿತು.

ವಿಪ್ರೋ ಷೇರು 13 ರೂ. ಗಳಿಕೆಯೊಂದಿಗೆ ರೂ. 722.50 ರಲ್ಲಿ ಆರಂಭವಾಯಿತು. ಎಚ್‌ಸಿಎಲ್ ಟೆಕ್‌ನ ಷೇರುಗಳು ರೂ .1238.10 ರಲ್ಲಿ 17 ರೂ. ಗಳಿಕೆ ಯೊಂದಿಗೆ ಪ್ರಾರಂಭವಾಯಿತು. ಟೆಕ್ ಮಹೀಂದ್ರಾ ಷೇರುಗಳು ರೂ .1498.40 ಕ್ಕೆ ಪ್ರಾರಂಭವಾದವು, ರೂ .19 ರಷ್ಟು ಹೆಚ್ಚಾಗಿದೆ. ಭಾರ್ತಿ ಏರ್‌ಟೆಲ್‌ನ ಷೇರುಗಳು ರೂ. 688.00 ಕ್ಕೆ ಆರಂಭ ವಾಗಿದ್ದು, ರೂ. 7 ರಷ್ಟು ಏರಿಕೆಯಾಗಿದೆ.

ಐಟಿಸಿಯ ಷೇರು 256.20 ರೂ.ನಲ್ಲಿ ಆರಂಭವಾಯಿತು, ಸುಮಾರು 6 ರೂ. ಇಳಿಕೆಗೊಂಡಿದೆ. ಐಷರ್ ಮೋಟಾರ್ಸ್ ನ ಷೇರುಗಳು ರೂ .78 ರಷ್ಟು ಇಳಿಕೆಯಾಗಿ ರೂ .2,788.75 ಕ್ಕೆ ಆರಂಭವಾಯಿತು. ಅಲ್ಟ್ರಾ ಟೆಕ್ ಸಿಮೆಂಟ್ ನ ಷೇರು 69 ರೂ ಇಳಿಕೆಯಾಗಿ 7,330.25 ಕ್ಕೆ ಆರಂಭವಾಯಿತು. ಟೈಟಾನ್ ಕಂಪನಿಯ ಷೇರುಗಳು ರೂ .2,565.50 ರಲ್ಲಿ ಪ್ರಾರಂಭವಾಗಿದೆ.

ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆ ಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯ ಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.