Wednesday, 11th December 2024

ಷೇರುಪೇಟೆ ಭರ್ಜರಿ ಏರಿಕೆ: 54,000 ಗಡಿ ದಾಟಿದ ಸೆನ್ಸೆಕ್ಸ್

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಬುಧವಾರ ಭರ್ಜರಿ ಏರಿಕೆ ಕಂಡಿದೆ. ಷೇರುಪೇಟೆ ಸೆನ್ಸೆಕ್ಸ್ ಮೊಟ್ಟ ಮೊದಲ ಬಾರಿಗೆ 54,000 ಗಡಿ ದಾಟಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಈಗಾಗಲೇ 16,000 ಪಾಯಿಂಟ್ಸ್‌ಗಿಂತ ಹೆಚ್ಚಾಗಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 409.95 ಪಾಯಿಂಟ್ಸ್ ಏರಿಕೆಗೊಂಡು 54233.31, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 113.9 ಪಾಯಿಂಟ್ಸ್ ಹೆಚ್ಚಾಗಿ 16244.65 ಪಾಯಿಂಟ್ಸ್ ಮುಟ್ಟಿದೆ. 1391 ಷೇರುಗಳು ಏರಿಕೆಗೊಂಡರೆ, 338 ಷೇರುಗಳು ಕುಸಿದವು ಮತ್ತು 68 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಎಚ್‌ಡಿಎಫ್‌ಸಿ ಷೇರುಗಳು ರೂ .598.80 ರಲ್ಲಿ ಆರಂಭವಾಗಿದ್ದು, 44 ರೂ. ರಷ್ಟು ಹೆಚ್ಚಾಗಿದೆ. ಟಾಟಾ ಸ್ಟೀಲ್ ಷೇರುಗಳು 19 ರೂ. ಏರಿಕೆಯಾಗಿ 1,426.10 ರೂಪಾಯಿಗೆ ಆರಂಭವಾಯಿತು. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು 13 ರೂಪಾಯಿ ಏರಿಕೆಯಾಗಿದೆ 1,447.85 ಕ್ಕೆ ತಲುಪಿದೆ. ಇನ್ನು ಇನ್ಫೋಸಿಸ್ ಷೇರುಗಳು 16 ರೂಪಾಯಿ ಹೆಚ್ಚಾಗಿ 1671.60 ರೂ. ಪ್ರಾರಂಭವಾಗಿದೆ.