ಮುಂಬೈ: ಮುಂಬೈ ಷೇರುಪೇಟೆ ಬುಧವಾರ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಸಂವೇದಿ ಸೂಚ್ಯಂಕ 29 ಅಂಕಗಳಷ್ಟು ಅಲ್ಪ ಕುಸಿತದೊಂದಿಗೆ 58,250.26 ಅಂಕಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿದೆ. ಎನ್ ಎಸ್ ಇ ನಿಫ್ಟಿ ಕೂಡಾ 9 ಅಂಕ ಕುಸಿತದೊಂದಿಗೆ 17,353.50 ಅಂಕಗಳಲ್ಲಿ ವಹಿವಾಟು ಕೊನೆಗೊಳಿಸಿದೆ.
ಸೆನ್ಸೆಕ್ಸ್, ನಿಫ್ಟಿ ಸಮನಾಂತರ ಇಳಿಕೆಯಾಗಿದ್ದರೂ ಕೋಟಕ್ ಮಹೀಂದ್ರ ಬ್ಯಾಂಕ್, ಎನ್ ಟಿಪಿಸಿ, ಟೈಟಾನ್ ಮತ್ತು ಸನ್ ಫಾರ್ಮಾ ಷೇರುಗಳು ಲಾಭ ಗಳಿಸಿವೆ.
ಕೇಂದ್ರ ಸರ್ಕಾರದ ಉತ್ಪಾದನೆ ಸಂಬಂಧಿತ ಪ್ರೋತ್ಸಾಹ ಯೋಜನೆ (ಪಿಎಲ್ ಐ) ಹಾಗೂ ಕೋವಿಡ್ ಲಸಿಕೆ ಅಭಿಯಾನದ ಬಿರುಸಿನ ಪರಿಣಾಮ ಮುಂಬಯಿ ಷೇರು ಮಾರುಕಟ್ಟೆ ವಹಿವಾಟು ಆರಂಭಿಕವಾಗಿ ಉತ್ತಮವಾಗಿದ್ದರೂ, ನಂತರ ದುರ್ಬಲ ವಹಿವಾಟಿನ ಪರಿಣಾಮ ಸೆನ್ಸೆಕ್ಸ್ ಮತ್ತು ನಿಫ್ಟಿ ಇಳಿಕೆ ಕಾಣುವಂತಾಗಿದೆ.