ಮುಂಬೈ: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಶುಕ್ರವಾರದ ಆರಂಭ ಸೆಷನ್ನಲ್ಲಿ ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್, ನಿಫ್ಟಿ 313 ಪಾಯಿಂಟ್ಸ್ ಕುಸಿತ ಕಂಡಿದೆ.
ಸೆನ್ಸೆಕ್ಸ್ 790.27 ಪಾಯಿಂಟ್ಸ್ ಕುಸಿದು 54,312.41 ಪಾಯಿಂಟ್ಸ್ ಮುಟ್ಟಿದರೆ, ನಿಫ್ಟಿ 229.80 ಪಾಯಿಂಟ್ಸ್ ರಷ್ಟು ನೆಲ ಕಚ್ಚಿ, 16,268.20 ಪಾಯಿಂಟ್ಸ್ ಮಟ್ಟವನ್ನು ಮುಟ್ಟಿತು. 1048 ಕಂಪೆನಿಗಳ ಷೇರು ಏರಿಕೆ ದಾಖಲಿಸಿದರೆ, 1726 ಕಂಪೆನಿಗಳ ಷೇರು ಇಳಿಕೆ ಕಂಡವು. 108 ಕಂಪೆನಿಗಳ ಷೇರುಗಳ ಬೆಲೆ ಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ವಾಹನ ಸೂಚ್ಯಂಕ ಅತಿ ದೊಡ್ಡ ನಷ್ಟ ಕಂಡು, ಶೇ 2.82ರಷ್ಟು ಕುಸಿತ ಕಂಡಿತು.
ಬಿಎಸ್ಇ ರಿಯಾಲ್ಟಿ ಶೇ 2.01, ಬಿಎಸ್ಇ ಐಟಿ ಶೇ 1.36ರಷ್ಟು ಇಳಿಕೆ ಕಂಡಿತು. ಅಮೆರಿಕದ ಡಾಲರ್ ವಿರುದ್ಧ ರುಪಾಯಿ ಮೌಲ್ಯ 15 ಪೈಸೆ ಇಳಿಕೆ ಯೊಂದಿಗೆ 76.06ರಲ್ಲಿ ಆರಂಭಗೊಂಡಿತು.