Saturday, 23rd November 2024

ಸೆನ್ಸೆಕ್ಸ್ 273 ಪಾಯಿಂಟ್ಸ್‌ ಕುಸಿತ

ಮುಂಬೈ: ಭಾರತೀಯ ಷೇರುಪೇಟೆ ಮಂಗಳವಾರ ಸಕಾರಾತ್ಮಕ ಆರಂಭ ಪಡೆದರೂ, ಅಂತ್ಯವು ಕುಸಿತ ದೊಂದಿಗೆ ಮುಕ್ತಾಯಗೊಂಡಿದೆ. ಸೆನ್ಸೆಕ್ಸ್ 273 ಪಾಯಿಂಟ್ಸ್‌ ಕುಸಿತಗೊಂಡರೆ, ನಿಫ್ಟಿ 78 ಪಾಯಿಂಟ್ಸ್ ಇಳಿಕೆ ಯಾಗಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 273.51 ಪಾಯಿಂಟ್ಸ್‌ ಇಳಿಕೆಗೊಂಡು 52578.76 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 78 ಪಾಯಿಂಟ್ಸ್ ಕುಸಿದು 15746.50 ಪಾಯಿಂಟ್ಸ್‌ ಮುಟ್ಟಿದೆ. ದಿನದ ವಹಿವಾಟು ಅಂತ್ಯಕ್ಕೆ 1563 ಷೇರುಗಳು ಏರಿಕೆಗೊಂಡರೆ, 1630 ಷೇರುಗಳು ಕುಸಿದವು.

ಡಾ.ರೆಡ್ಡೀಸ್ ಲ್ಯಾಬ್ಸ್, ಸಿಪ್ಲಾ, ಆಕ್ಸಿಸ್ ಬ್ಯಾಂಕ್, ಅದಾನಿ ಪೋರ್ಟ್ಸ್ ಮತ್ತು ಡಿವಿಸ್ ಲ್ಯಾಬ್ಸ್ ನಿಫ್ಟಿಯಲ್ಲಿ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿದ್ದು, ಹಿಂಡಾಲ್ಕೊ ಇಂಡಸ್ಟ್ರೀಸ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಟಾಟಾ ಸ್ಟೀಲ್, ಬಜಾಜ್ ಫಿನ್‌ಸರ್ವ್ ಮತ್ತು ಎಸ್‌ಬಿಐ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ ಮೌಲ್ಯ ಪ್ರತಿ ಡಾಲರ್‌ಗೆ 74.46 ಕ್ಕೆ ತಲುಪಿದೆ. ಇದು ಹಿಂದಿನ 74.42 ರೂಪಾಯಿಗೆ ಹೋಲಿಸಿದರೆ ಪ್ರತಿ ಡಾಲರ್‌ಗೆ 74.36ಕ್ಕಿಂತ ಸ್ವಲ್ಪ ಹೆಚ್ಚಾಗಿದೆ.