Friday, 13th December 2024

ಸೆನ್ಸೆಕ್ಸ್‌ 60.000 ಕ್ಕೆ ಏರಿಕೆ

ಮುಂಬೈ: ಹೂಡಿಕೆದಾರರಿಗೆ ಆರಂಭಿಕ ವಹಿವಾಟಿನಲ್ಲಿ ಶುಭ ಸುದ್ದಿ ಸಿಕ್ಕಿದೆ.

ಸೆನ್ಸೆಕ್ಸ್‌ 60.000 ಕ್ಕೆ ಏರಿಕೆ ಕಂಡಿದ್ದರೆ, ನಿಫ್ಟಿ 80 ಪಾಯಿಂಟ್‌ ತಲುಪಿದೆ. ವಿದೇಶಿ ನಿಧಿಯ ಒಳಹರಿವಿನ ನಡುವೆ ಈಕ್ವಿಟಿ ಮಾನದಂಡಗಳು ಸಕಾರಾತ್ಮಕ ಆರಂಭ ನೀಡಿವೆ. ಚಿಲ್ಲರೆ ಹಣದುಬ್ಬರ ಮತ್ತು ಕೈಗಾರಿಕಾ ಉತ್ಪಾದನೆಯ ದತ್ತಾಂಶ ಮಾರುಕಟ್ಟೆ ಆರಂಭದ ಬಳಿಕ ನಿಗದಿಯಾಗಲಿದೆ.

ಸತತ ಮೂರನೇ ಸೆಷನ್‌ನಲ್ಲಿನ ಏರಿಕೆ ಮೂಲಕ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 274.07 ಪಾಯಿಂಟ್‌ಗಳ ಏರಿಕೆ ಕಂಡು 60,067.21ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 79.45 ಪಾಯಿಂಟ್‌ಗಳ ಏರಿಕೆ ಕಂಡು 17,910.50 ಕ್ಕೆ ತಲುಪಿದೆ.

30-ಷೇರುಗಳ ಸೆನ್ಸೆಕ್ಸ್ ಪ್ಯಾಕ್‌ನಿಂದ, ಟೆಕ್ ಮಹೀಂದ್ರಾ, ಇನ್ಫೋಸಿಸ್, ಬಜಾಜ್ ಫಿನ್‌ ಸರ್ವ್, ಮಹೀಂದ್ರ ಮತ್ತು ಮಹೀಂದ್ರಾ, ಟಾಟಾ ಸ್ಟೀಲ್ ಮತ್ತು ಐಸಿಐಸಿಐ ಬ್ಯಾಂಕ್ ಗೇನರ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.