Saturday, 23rd November 2024

ಷೇರುಪೇಟೆ ಸಕಾರಾತ್ಮಕ: ಸೆನ್ಸೆಕ್ಸ್ 193 ಪಾಯಿಂಟ್ಸ್‌ ಏರಿಕೆ

ಮುಂಬೈ/ ನವದೆಹಲಿ: ಭಾರತೀಯ ಷೇರುಪೇಟೆ ಸಕಾರಾತ್ಮಕವಾಗಿ ಏರುತ್ತಲೇ ಮುನ್ನುಗ್ಗಿದೆ. ಷೇರುಪೇಟೆ ಸೆನ್ಸೆಕ್ಸ್ 193 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 40 ಪಾಯಿಂಟ್ಸ್‌ ಹೆಚ್ಚಳ ಕಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 197.97 ಪಾಯಿಂಟ್ಸ್‌ ಏರಿಕೆಗೊಂಡು 50738.45 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 44.25 ಪಾಯಿಂಟ್ಸ್ ಹೆಚ್ಚಾಗಿ 15219.85 ಪಾಯಿಂಟ್ಸ್‌ಗೆ ಮುಟ್ಟಿದೆ. ದಿನದ ವಹಿವಾಟು ಆರಂಭದಲ್ಲಿ 1562 ಷೇರುಗಳು ಏರಿಕೆಗೊಂಡರೆ, 1004 ಷೇರುಗಳು ಕುಸಿದವು ಮತ್ತು 131 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಎಸ್‌ಬಿಐ ಷೇರು (13 ರೂ).ಗಳ ಏರಿಕೆ ಕಂಡು 414.35 ರೂ., ಹೀರೋ ಮೊಟೊಕಾರ್ಪ್ ಷೇರು (28 ರೂ.) ಏರಿಕೆ ಕಂಡು 2,912.30 ರೂ.ಗೆ ತಲುಪಿದೆ. ಐಒಸಿ ಷೇರುಗಳು( ರೂ. 105.20) ಪ್ರಾರಂಭವಾಗಿದ್ದು, 1 ರೂ.ಹೆಚ್ಚಾದರೆ, ಬಿಪಿಸಿಎಲ್ ಷೇರುಗಳು ](4 ರೂ) ಹೆಚ್ಚಾಗಿ 465.00 ರೂ., ಸಿಪ್ಲಾ ಷೇರು (7 ರೂ.)ಗಳ ಲಾಭದೊಂದಿಗೆ 934.05 ರೂ. ತಲುಪಿದೆ.

ಹಿಂಡಾಲ್ಕೊ, ಟಾಟಾ ಸ್ಟೀಲ್, ಶ್ರೀ ಸಿಮೆಂಟ್, ಟೈಟಾನ್, ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಕುಸಿತ ಕಂಡು 694.40 ರೂ. ಮುಟ್ಟಿದೆ.