Friday, 13th December 2024

ಭಾರೀ ಕುಸಿತ ಕಂಡ ಸೆನ್ಸೆಕ್ಸ್: ಬಿಎಸ್‌ಇ 1057.48 ಪಾಯಿಂಟ್ ನಷ್ಟ

ಮುಂಬೈ: ಭಾರತೀಯ ಷೇರುಪೇಟೆ ಶುಕ್ರವಾರ ಭಾರೀ ಕುಸಿತದೊಂದಿಗೆ ವಹಿವಾಟು ಆರಂಭವಾಗಿ ಬಿಎಸ್‌ಇ ಸೆನ್ಸೆಕ್ಸ್ 1057.48 ಪಾಯಿಂಟ್‌ಗಳ ಕುಸಿತ ಕಂಡಿದ್ದು, 49981.83 ರ ಮಟ್ಟದಲ್ಲಿ ತೆರೆಯಿತು.

ಅದೇ ಸಮಯದಲ್ಲಿ, ಎನ್‌ಎಸ್‌ಇ ನಿಫ್ಟಿ 305.90 ಪಾಯಿಂಟ್‌ಗಳ ಕುಸಿತದೊಂದಿಗೆ 14791.50 ಪಾಯಿಂಟ್‌ಗಳಲ್ಲಿ ವಹಿವಾಟು ಆರಂಭಿಸಿತು. ಬಿಎಸ್‌ಇಯಲ್ಲಿ ಒಟ್ಟು 1,091 ಕಂಪನಿಗಳಲ್ಲಿ ವಹಿವಾಟು ಪ್ರಾರಂಭವಾಗಿದ್ದು, ಅದರಲ್ಲಿ ಸುಮಾರು 338 ಷೇರು ಗಳು ಲಾಭಗಳಿಸಿದರೆ 704 ಷೇರುಗಳು ನಷ್ಟಗೊಂಡವು.