Saturday, 12th October 2024

ಸಂವೇದಿ ಸೂಚ್ಯಂಕ 81 ಅಂಕಗಳಷ್ಟು ಕುಸಿತ

ಮುಂಬೈ: ಮಿಶ್ರ ವಹಿವಾಟಿನ ಪರಿಣಾಮ ಬುಧವಾರ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 81 ಅಂಕಗಳಷ್ಟು ಕುಸಿತ ದೊಂದಿಗೆ ದಿನಾಂತ್ಯದ ವಹಿವಾಟು ಕೊನೆ ಗೊಳಿಸಿದೆ.

ಸಂವೇದಿ ಸೂಚ್ಯಂಕ 80.63 ಅಂಕ ಇಳಿಕೆಯಾಗಿದ್ದು, 60,352.82 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಎನ್ ಎಸ್ ಇ ನಿಫ್ಟಿ 27.05 ಅಂಕಗಳಷ್ಟು ಇಳಿಕೆಯಾಗಿದ್ದು, 18,017.20 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಸೆನ್ಸೆಕ್ಸ್, ನಿಫ್ಟಿ ಇಂಡಸ್ ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಎಚ್ ಯುಎಲ್, ಏಷ್ಯನ್ ಪೇಂಟ್ಸ್, ಟೈಟಾನ್ ಮತ್ತು ಎಸ್ ಬಿಐ ಷೇರುಗಳು ನಷ್ಟ ಕಂಡಿದೆ. ಭಾರ್ತಿ ಏರ್ ಟೆಲ್, ಮಹೀಂದ್ರ ಆಯಂಡ್ ಮಹೀಂದ್ರ, ಸನ್ ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್, ಐಟಿಸಿ ಷೇರುಗಳು ಲಾಭಗಳಿಸಿದೆ.

ಹಣದುಬ್ಬರದ ಪರಿಣಾಮ ದೇಶೀಯ ಷೇರುಮಾರುಕಟ್ಟೆಯಲ್ಲಿ ಆರಂಭಿಕ ವಹಿವಾಟಿ ನಲ್ಲಿಯೇ ಹೂಡಿಕೆದಾರರು ನಿರಾಸಕ್ತಿ ತೋರಿರುವುದಾಗಿ ವರದಿ ತಿಳಿಸಿದೆ.