ಮುಂಬೈ/ನವದೆಹಲಿ: ಭಾರತದ ಷೇರುಪೇಟೆ ಗುರುವಾರ ಸಮತಟ್ಟಾದ ಆರಂಭ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 10.57 ಪಾಯಿಂಟ್ಸ್ ಇಳಿಕೆ ಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 1.10 ಪಾಯಿಂಟ್ಸ್ ಕುಸಿದಿದೆ.
ಸೆನ್ಸೆಕ್ಸ್ 10.57 ಪಾಯಿಂಟ್ಸ್ ಕುಸಿದು 52472.14 ಮುಟ್ಟಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 1.10 ಪಾಯಿಂಟ್ಸ್ ಇಳಿಕೆಗೊಂಡು 15720.40 ಪಾಯಿಂಟ್ಸ್ ತಲುಪಿದೆ. ದಿನದ ವಹಿವಾಟು ಆರಂಭಗೊಂಡಾಗ 1376 ಷೇರುಗಳು ಏರಿಕೆಗೊಂಡರೆ, 728 ಷೇರುಗಳು ಕುಸಿದವು.
ಮಹೀಂದ್ರಾ ಮತ್ತು ಮಹೀಂದ್ರಾ ಷೇರು 12 ರೂ.ಗಳ ಲಾಭದೊಂದಿಗೆ 789.90 ರೂಗಳಲ್ಲಿ ತೆರೆಯಿತು. ಏಷ್ಯನ್ ಪೇಂಟ್ಸ್‌ನ ಷೇರುಗಳು 28 ರೂ.ಗಳ ಏರಿಕೆ ಕಂಡು 3,020.55 ರೂ., ಈಚರ್ ಮೋಟಾರ್ಸ್‌ನ ಷೇರುಗಳು 21 ರೂ.ಗಳ ಏರಿಕೆ ಕಂಡು 2,692.55 ರೂ., ಗಳಲ್ಲಿ ಪ್ರಾರಂಭವಾಯಿತು. ಟಾಟಾ ಮೋಟಾರ್ಸ್‌ನ ಷೇರುಗಳು ಸುಮಾರು 2 ರೂ.ಗಳ ಲಾಭದೊಂದಿಗೆ 341.80 ರೂ. ತಲುಪಿದೆ.
ಇನ್ಫೋಸಿಸ್ ಷೇರುಗಳು ಸುಮಾರು 14 ರೂ.ಗಳಷ್ಟು ಇಳಿಕೆಯಾಗಿ 1,566.60 ರೂ., ಟಾಟಾ ಸ್ಟೀಲ್ ಷೇರುಗಳು ಸುಮಾರು 2 ರೂ.ಗಳಷ್ಟು ಇಳಿಕೆಯಾಗಿ 1,164.30 ರೂ., ಬಜಾಜ್ ಫೈನಾನ್ಸ್‌ನ ಷೇರುಗಳು ಸುಮಾರು 10 ರೂ.ಗಳಷ್ಟು ಇಳಿಕೆಯಾಗಿ 6,005.50 ರೂ. ಮುಟ್ಟಿದೆ.