Saturday, 14th December 2024

ಸೆನ್ಸೆಕ್ಸ್ 975 ಪಾಯಿಂಟ್ಸ್‌ ಜಿಗಿತ, ನಿಫ್ಟಿಯಲ್ಲೂ ಹೆಚ್ಚಳ

ಮುಂಬೈ/ ನವದೆಹಲಿ: ಭಾರತೀಯ ಷೇರುಪೇಟೆ ಶುಕ್ರವಾರ ಸೆನ್ಸೆಕ್ಸ್ 975 ಪಾಯಿಂಟ್ಸ್‌ ಜಿಗಿತಗೊಂಡಿದೆ. ರಾಷ್ಟ್ರೀಯ ಷೇರು ಪೇಟೆ ನಿಫ್ಟಿ 15500 ಮಟ್ಟಕ್ಕಿಂತ ಹೆಚ್ಚಾಗಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 975,62 ಪಾಯಿಂಟ್ಸ್ ಏರಿಕೆಗೊಂಡು 50,540.48 ಪಾಯಿಂಟ್ಸ್‌, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 269.30 ಪಾಯಿಂಟ್ಸ್ ಏರಿಕೆಗೊಂಡು 15,175.30 ಪಾಯಿಂಟ್ಸ್‌ ಮುಟ್ಟಿದೆ. ದಿನದ ವಹಿವಾಟು ಅಂತ್ಯಕ್ಕೆ 1909 ಷೇರುಗಳು ಏರಿಕೆ ಗೊಂಡರೆ, 1140 ಷೇರುಗಳು ಕುಸಿದಿವೆ ಮತ್ತು 157 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ, ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ. ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ತಲಾ 3 ಪ್ರತಿಶತದಷ್ಟು ಏರಿಕೆಗೊಂಡಿವೆ. ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಪ್ರತಿ ಡಾಲರ್‌ಗೆ 72.83 ಕ್ಕೆ ತಲುಪಿದೆ.