ಮುಂಬೈ: ಭಾರತೀಯ ಷೇರುಪೇಟೆ ಸತತವಾಗಿ ಏರಿಕೆಯ ಹಾದಿ ಹಿಡಿದಿದ್ದು ಶುಕ್ರವಾರ ಜಿಗಿತ ಕಂಡಿದೆ. ಸೆನ್ಸೆಕ್ಸ್ 291 ಪಾಯಿಂಟ್ಸ್ ಹಾಗೂ ರಾಷ್ಟ್ರೀಯ ಷೇರುಪೇಟೆ ನಿಫ್ಟಿ 99.10 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 291.44 ಪಾಯಿಂಟ್ಸ್ ಏರಿಕೆಗೊಂಡು 51406.66 ಗೆ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 99.10 ಪಾಯಿಂಟ್ಸ್ ಹೆಚ್ಚಾಗಿ 15437 ಮುಟ್ಟಿದೆ. 1363 ಷೇರುಗಳು ಏರಿಕೆಗೊಂಡರೆ, 419 ಷೇರುಗಳು ಕುಸಿದವು ಮತ್ತು 60 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ಟಾಟಾ ಸ್ಟೀಲ್ ಷೇರುಗಳು ಸುಮಾರು 42 ರೂ.ಗಳ ಏರಿಕೆ ಕಂಡು 1,138.30 ರೂ., ಈಚರ್ ಮೋಟಾರ್ಸ್ ಷೇರುಗಳು 77 ರೂ ಗಳಿಸಿ 2,680.55 ರೂಗಳಿಗೆ ತಲುಪಿದೆ. ಹಿಂಡಾಲ್ಕೊ ಷೇರು 10 ರೂ.ಗಳ ಏರಿಕೆ ಕಂಡು 395.55 ರೂ., ಗ್ರೇಸಿಮ್‌ನ ಷೇರು ಸುಮಾರು 20 ರೂ.ಗಳಿಂದ 1,437.35 ರೂ. ತಲುಪಿದೆ.
ಸನ್ ಫಾರ್ಮಾ ಷೇರುಗಳು 17 ರೂ.ಗಳ ಇಳಿಕೆ 682.60 ರೂ., ವಿಪ್ರೋ ಷೇರುಗಳು 5 ರೂ.ಗಳ ಕುಸಿತ ಕಂಡು 536.35 ರೂ., ಡಾ. ರೆಡ್ಡಿ ಲ್ಯಾಬ್ಸ್ ಷೇರು 44 ರೂ.ಗಳನ್ನು ಕಳೆದುಕೊಂಡು 5,225.05 ರೂ., ಸಿಪ್ಲಾ ಷೇರು 7 ರೂ. ಕುಸಿದು 934.95 ರೂ., ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು 6 ರೂ.ಗಳ ಕುಸಿತ ಕಂಡು 823.05 ರೂ. ತಲುಪಿದೆ.