Saturday, 23rd November 2024

ಸಂವೇದಿ ಸೂಚ್ಯಂಕ: 200ಕ್ಕೂ ಅಧಿಕ ಅಂಕಗಳ ಏರಿಕೆ

ಮುಂಬೈ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ಧನಾತ್ಮಕ ವಹಿವಾಟಿನ ಪರಿಣಾಮ ಸೋಮವಾರ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 200ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ದಾಖಲೆ ಬರೆದಿದೆ.

ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 245.62 ಅಂಕಗಳ ಏರಿಕೆಯೊಂದಿಗೆ 60,339.28 ಅಂಕ, ಸೆನ್ಸೆಕ್ಸ್ 245.62 ಅಂಕಗಳೊಂದಿಗೆ 60,294.09 ಅಂಕಗಳಲ್ಲಿ ವಹಿವಾಟು ನಡೆಸಿದೆ.

ಎನ್ ಎಸ್ ಇ ನಿಫ್ಟಿ 69.90 ಅಂಕಗಳ ಏರಿಕೆಯೊಂದಿಗೆ ದಾಖಲೆಯ 17,923.10 ಅಂಕಗಳ ಮಟ್ಟ ತಲುಪಿದೆ. ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಮಾರುತಿ, ಎಚ್ ಡಿಎಫ್ ಸಿ ಬ್ಯಾಂಕ್, ಎಸ್ ಬಿಐ, ಬಜಾಜ್ ಆಟೋ, ಮಹೀಂದ್ರ ಆಯಂಡ್ ಮಹೀಂದ್ರ, ಆಯಕ್ಸಿಸ್ ಬ್ಯಾಂಕ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಲಾಭ ಗಳಿಸಿದೆ.

ಕಳೆದ ಶುಕ್ರವಾರ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 163.11 ಅಂಕಗಳ ಏರಿಕೆಯೊಂದಿಗೆ ದಾಖಲೆಯ 60,048 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಳಿಸಿತ್ತು.