Wednesday, 11th December 2024

ಸೆನ್ಸೆಕ್ಸ್‌ ಭರ್ಜರಿ ಜಿಗಿತ: ಸೂಚ್ಯಂಕ 500 ಅಂಕಗಳ ಏರಿಕೆ

ಮುಂಬೈ: ಸಾಲದ ಮಿತಿ ಹೆಚ್ಚಳಕ್ಕೆ ಸಂಸತ್ತಿನ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಅಮೆರಿಕ ನಿರ್ಧಾರಕ್ಕೆ ಬಂದ ಬೆನ್ನಲ್ಲೇ ಸೋಮವಾರ ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್‌ ಕೂಡಾ ಭರ್ಜರಿ ಜಿಗಿತ ಕಾಣುವ ಮೂಲಕ ದಾಖಲೆಯ 63,000 ಅಂಕಗಳ ಮಟ್ಟ ತಲುಪಿದೆ.

ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 500 ಅಂಕಗಳಷ್ಟು ಏರಿಕೆ ಕಂಡಿದ್ದು, ಇದರೊಂದಿಗೆ 63,000ಮಟ್ಟ ತಲುಪಿದೆ. ಅದೇ ರೀತಿ ನಿಫ್ಟಿ 110.55 ಅಂಕಗಳಷ್ಟು ಜಿಗಿತ ಕಂಡಿದ್ದು, 18,609.90ಕ್ಕೆ ತಲುಪಿದೆ.

ಬಾಂಬೆ ಷೇರುಪೇಟೆ ವಹಿವಾಟು ಆರಂಭಗೊಂಡ ಬೆನ್ನಲ್ಲೇ ಸೂಚ್ಯಂಕ 503.23 ಅಂಕಗಳಷ್ಟು ಏರಿಕೆಯಾಗಿತ್ತು. ನಿಫ್ಟಿ ಕೂಡಾ 132.40 ಅಂಕಗಳಷ್ಟು ಏರಿಕೆ ಕಂಡಿತ್ತು.

ಸೆನ್ಸೆಕ್ಸ್‌, ನಿಫ್ಟಿ ಏರಿಕೆಯಿಂದ ಮಹೀಂದ್ರ & ಮಹೀಂದ್ರ, ಎಸ್‌ ಬಿಐ ಲೈಫ್‌, ಎಚ್‌ ಡಿಎಫ್‌ ಸಿ, ಇಂಡಸ್‌ ಇಂಡ್‌ ಬ್ಯಾಂಕ್‌ ಮತ್ತು ಎಚ್‌ ಡಿಎಫ್‌ ಸಿ ಲೈಫ್‌ ಷೇರುಗಳು ಲಾಭ ಕಂಡಿವೆ.