Saturday, 23rd November 2024

ಸೆನ್ಸೆಕ್ಸ್‌, ನಿಫ್ಟಿ ವಹಿವಾಟಿನಲ್ಲಿ ಭಾರಿ ಕುಸಿತ

ಮುಂಬೈ: ಮುಂಬೈ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಸೆನ್ಸೆಕ್ಸ್‌ ಮತ್ತು ನಿಫ್ಟಿ ವಹಿವಾಟಿನಲ್ಲಿ ಭಾರಿ ಕುಸಿತ ಕ್ಕೀಡಾಯಿತು. ಸೆನ್ಸೆಕ್ಸ್‌ 634 ಅಂಕ ಕಳೆದುಕೊಂಡು 59,170ಕ್ಕೆ ಬೆಳಗ್ಗೆ 11.30ಕ್ಕೆ ಇಳಿಮುಖವಾಗಿದ್ದರೆ, ನಿಫ್ಟಿ 161 ಅಂಕ ನಷ್ಟದಲ್ಲಿ 17,428ರಲ್ಲಿತ್ತು.

ಇದರ ಪರಿಣಾಮ ಹೂಡಿಕೆದಾರರು 3 ಲಕ್ಷ ಕೋಟಿ ರೂ. ಕಳೆದುಕೊಂಡರು.

ಅಮೆರಿಕದ ಬ್ಯಾಂಕ್‌ ಎಸ್‌ವಿಬಿ ಫೈನಾನ್ಷಿಯಲ್‌ ಗ್ರೂಪ್‌ ಆರಂಭಿಕ ಹಂತದ ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡುತ್ತದೆ. ಈ ಕಂಪನಿಯ ಷೇರುಗಳ ದರ ದಲ್ಲಿ 60% ಕುಸಿತ ಸಂಭವಿಸಿದೆ. 6.48 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ ಮೌಲ್ಯ ಕರಗಿತು. ಇದು ಕೇವಲ ವಾಲ್‌ ಸ್ಟ್ರೀಟ್‌ ಮಾತ್ರವ್ಲಲದೆ ಜಾಗತಿಕ ಷೇರು ಪೇಟೆಯ ಮೇಲೆಯೂ ಪ್ರಭಾವ ಬೀರಿತು.

ಎಚ್‌ಡಿಎಫ್‌ಸಿ ಸೇರಿದಂತೆ ಬ್ಯಾಂಕಿಂಗ್‌ ಷೇರುಗಳ ದರ ಇಳಿಕೆಯಾಯಿತು. ಅದಾನಿ ಎಂಟರ್‌ಪ್ರೈಸಸ್‌ ಷೇರು ದರ ಶುಕ್ರವಾರ 4% ಇಳಿಕೆ ದಾಖಲಿಸಿತ್ತು. 10 ಅದಾನಿ ಷೇರುಗಳ ದರ ತಗ್ಗಿತ್ತು.