Saturday, 14th December 2024

ಸೆನ್ಸೆಕ್ಸ್‌: 78,053.52 ಅಂಕಗಳ ದಾಖಲೆ

ಮುಂಬೈ: ಬಾಂಬೆ ಷೇರು ಪೇಟಯಲ್ಲಿ ಗೂಳಿ ನೆಗೆತ ಮುಂದುವರಿದಿದೆ. ಬುಧವಾರ 78,053.52 ಅಂಕಗಳ ದಾಖಲೆಯ ಮಟ್ಟಕ್ಕೆ ತಲುಪಿದ್ದ ಸೆನ್ಸೆಕ್ಸ್‌ ಗುರುವಾರ ಕೂಡ ಮೇಲ್ಮುಖವಾಗಿ ಸಾಗಿದೆ. ವಹಿವಾಟು ಆರಂಭದಲ್ಲಿ ಕುಸಿತ ದಾಖಲಿಸಿದ ನಂತರ ಸೆನ್ಸೆಕ್ಸ್‌ ಚೇತರಿಸಿಕೊಂಡಿದ್ದು, ಮೊದಲ ಬಾರಿಗೆ ಐತಿಹಾಸಿಕ 79,000 ಅಂಕ ಮುಟ್ಟಿದೆ. ನಿಫ್ಟಿ ಕೂಡ ಹೊಸ ದಾಖಲೆ ಬರೆದಿದೆ.

ಆರಂಭಿಕ ವಹಿವಾಟಿನಲ್ಲಿ ಕುಸಿದ ನಂತರ ಬೆಂಚ್ ಮಾರ್ಕ್ ಸೂಚ್ಯಂಕಗಳು ಜಿಗಿದುಕೊಂಡವು. ಸೆನ್ಸೆಕ್ಸ್ ಮೊದಲ ಬಾರಿಗೆ ಐತಿಹಾಸಿಕ 79,000 ಗಡಿಯನ್ನು ದಾಟಿತು ಮತ್ತು ನಿಫ್ಟಿ ಬ್ಲೂ-ಚಿಪ್ ಷೇರುಗಳ ಖರೀದಿಯ ಮಧ್ಯೆ ತನ್ನ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ನ ಬ್ಲೂ-ಚಿಪ್ ಮತ್ತು ಐಸಿಐಸಿಐಯ ಷೇರು ಖರೀದಿಯೊಂದಿಗೆ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 339.51 ಪಾಯಿಂಟ್ಸ್ ಏರಿಕೆ ಕಂಡು 79,013.76ಕ್ಕೆ ತಲುಪಿದೆ.

ಏಷ್ಯಾದ ಮಾರುಕಟ್ಟೆಗಳ ಪೈಕಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ವಹಿವಾಟು ಕೆಳ ಮಟ್ಟದಲ್ಲಿದೆ. ಅಮೆರಿಕ ಮಾರುಕಟ್ಟೆ ಬುಧವಾರ ಧನಾತ್ಮಕ ಅಂಶದೊಂದಿಗೆ ವಹಿವಾಟು ಅಂತ್ಯಗೊಳಿಸಿತ್ತು.