Saturday, 23rd November 2024

ಪ್ರಧಾನ ಮಂತ್ರಿ ಜನ್-ಧನ್ ಯೋಜನೆಗೆ ಏಳು ವರ್ಷ ಪೂರ್ಣ: 43.04 ಕೋಟಿ ಫಲಾನುಭವಿಗಳು

ನವದೆಹಲಿ : ಹಣಕಾಸು ಸೇರ್ಪಡೆಯ ರಾಷ್ಟ್ರೀಯ ಮಿಷನ್ ಪ್ರಧಾನ ಮಂತ್ರಿ ಜನ್-ಧನ್ ಯೋಜನೆ ಯಶಸ್ವಿ ಅನುಷ್ಠಾನದ ಏಳು ವರ್ಷಗಳನ್ನು ಪೂರ್ಣ ಗೊಳಿಸಿದೆ.

ಪಿಎಂಜೆಡಿವೈ ಅಡಿಯಲ್ಲಿ 43.04 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ಬ್ಯಾಂಕ್ ಖಾತೆ ತೆರೆಯಲಾಗಿದೆ. ಇದು 146,231 ಕೋಟಿ ರೂ ಸಂದಾಯವಾಗಿದೆ.

ಪ್ರಧಾನಿ ಸಚಿವ ನರೇಂದ್ರ ಮೋದಿ ಅವರು ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ನಾವು ಏಳು ವರ್ಷಗಳ #PMJanDhan ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಮುಂದುವರೆದಿದ್ದೇವೆ. ಭಾರತದ ಅಭಿವೃದ್ಧಿ ಪಥವನ್ನು ಶಾಶ್ವತವಾಗಿ ಪರಿವರ್ತಿಸಿದೆ. ಅಸಂಖ್ಯಾತ ಭಾರತೀಯರಿಗೆ ಆರ್ಥಿಕ ಸೇರ್ಪಡೆ ಮತ್ತು ಘನತೆಯ ಜೀವನ, ಸಬಲೀ ಕರಣವನ್ನು ಖಚಿತಪಡಿಸಿದೆ. ಜನ್ ಧನ್ ಯೋಜನೆ ಕೂಡ ಪಾರದರ್ಶಕತೆಗೆ ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.

#PMJanDhan ಯಶಸ್ವಿಗೊಳಿಸಲು ಶ್ರಮಿಸಿದ ಎಲ್ಲರ ದಣಿವರಿಯದ ಕೆಲಸ ಮಾಡಿದವರಿಗೆ ಶ್ಲಾಘಿಸಲು ಬಯಸು ತ್ತೇನೆ. ಅವರ ಪ್ರಯತ್ನಗಳು ಭಾರತದ ಜನರು ಉತ್ತಮ ಗುಣಮಟ್ಟದ ಜೀವನವನ್ನು ನಡೆಸುವುದನ್ನು ಖಚಿತಪಡಿಸಿವೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು 2014 ರ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಈ ಯೋಜನೆಯನ್ನು ಘೋಷಿಸಿದರು. ಆಗಸ್ಟ್ 28 ರಂದು ಕಾರ್ಯ ಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ, ಈ ಸಂದರ್ಭವನ್ನು ಬಡವರ ವಿಮೋಚನೆಯನ್ನು ವಿಷವರ್ತುಲದಿಂದ ಆಚರಿಸುವ ಹಬ್ಬ ಎಂದು ಬಣ್ಣಿಸಿದ್ದರು.

ಆರ್ ಬಿಐ ಮಾರ್ಗಸೂಚಿಗಳ ಪ್ರಕಾರ, ಎರಡು ವರ್ಷಗಳ ಅವಧಿಯಲ್ಲಿ ಖಾತೆಯಲ್ಲಿ ಗ್ರಾಹಕ ಪ್ರೇರಿತ ವಹಿವಾಟುಗಳಿಲ್ಲದಿದ್ದರೆ ಪಿಎಂಜೆಡಿವೈ ಖಾತೆಯನ್ನು ನಿಷ್ಕ್ರಿಯ ಎಂದು ಪರಿಗಣಿಸಲಾಗುತ್ತದೆ. ಆಗಸ್ಟ್ 2021 ರಲ್ಲಿ, ಒಟ್ಟು 43.04 ಕೋಟಿ ಪಿಎಂಜೆಡಿವೈ ಖಾತೆಗಳಲ್ಲಿ, 36.86 ಕೋಟಿ (85.6%) ಕಾರ್ಯ ನಿರ್ವಹಿಸುತ್ತಿವೆ. ಆಪರೇಟಿವ್ ಖಾತೆಗಳ % ನಲ್ಲಿ ನಿರಂತರ ಹೆಚ್ಚಳವು ಈ ಖಾತೆಗಳಲ್ಲಿ ಹೆಚ್ಚು ಹೆಚ್ಚು ಗ್ರಾಹಕರು ನಿಯಮಿತವಾಗಿ ಬಳಸುತ್ತಿದ್ದಾರೆ ಎಂಬುದರ ಸೂಚನೆಯಾಗಿದೆ.