Saturday, 14th December 2024

Sexual Harassment: ಟಿಡಿಪಿ ಶಾಸಕನ ಅಶ್ಲೀಲ ವಿಡಿಯೋ ಲೀಕ್‌; ಪಕ್ಷದ ನಾಯಕಿಯಿಂದಲೇ ಲೈಂಗಿಕ ದೌರ್ಜನ್ಯ ಆರೋಪ

Physical abuse

ಹೈದರಾಬಾದ್‌: ಆಂಧ್ರಪ್ರದೇಶದ ಟಿಡಿಪಿ (TDP) ಶಾಸಕರೊಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದ್ದು, ಇಡೀ ರಾಜಕೀಯ ರಂಗದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ. ಟಿಡಿಪಿ ಶಾಸಕ ಕೊನೇಟಿ ಆದಿಮೂಲಂ ತನಗೆ ಕರೆ ಮಾಡಿ ಲೈಂಗಿಕ ಕಿರುಕುಳ (Sexual Harassment) ನೀಡಿದ್ದಾರೆ ಎಂದು ಮಹಿಳೆಯೊಬ್ಬಳು ಆರೋಪಿಸಿದ್ದಾಳೆ. ಅಲ್ಲದೇ ಅವರು ಮಾಡಿರುವ ವಾಟ್ಸ್‌ಆಪ್‌ ಚಾಟಿಂಗ್‌ನ ಸ್ಕ್ರೀನ್‌ಶಾಟ್‌ಗಳನ್ನು ತೆಗೆದು ವೈರಲ್‌ ಮಾಡಿದ್ದಾಳೆ.

ತಿರುಪತಿ ಜಿಲ್ಲೆಯ ಸತ್ಯವೇಡು ಕ್ಷೇತ್ರದ ಟಿಡಿಪಿ ಶಾಸಕ ಕೊನೇಟಿ ಆದಿಮೂಲಂ ವಿರುದ್ಧ ಅವರದೇ ಪಕ್ಷದ ಮಹಿಳಾ ನಾಯಕಿ ಈ ಸಂಚಲನದ ಆರೋಪ ಮಾಡಿದ್ದು, ವಿಡಿಯೋಗಳ ಸಮೇತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ದೂರು ನೀಡಿದ್ದಾಳೆ ಎನ್ನಲಾಗಿದೆ.

ಆದಿಮೂಲಂ ಶಾಸಕರಾಗಿ ಗೆದ್ದ ನಂತರ ಅವರು ತಮ್ಮನ್ನು ಗುರಿಯಾಗಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಕರೆ ಮಾಡಿ, ಸಂದೇಶದ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಆತನ ಕಿರುಕುಳ ಸಹಿಸಲಾಗದೆ ಆಕೆ ಆಗಸ್ಟ್ 6 ಮತ್ತು 17ರಂದು ಸಂಜೆ ತಿರುಪತಿಯ ಹೋಟೆಲ್ ಕೋಣೆಗೆ ಹೋಗಿದೆ. ಅಲ್ಲಿ ಶಾಸಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಆ ನಂತರವೂ ಶಾಸಕರು ಪತಿಗೆ ಕಿರುಕುಳ ನೀಡಿರುವುದು ಗೊತ್ತಾಗಿದೆ. ಹೀಗಾಗಿ ಸಹಾಯ ಮಾಡುವಂತೆ ಮಹಿಳೆ ಮನವಿ ಮಾಡಿದ್ದಾಳೆ.

ಶಾಸಕನ ಕುಕೃತ್ಯ ಪೆನ್‌ ಕ್ಯಾಮೆರಾದಲ್ಲಿ ಸೆರೆ

ಪತಿಯ ಸಹಾಯದಿಂದ ಶಾಸಕನನ್ನು ಸಾಕ್ಷಿ ಸಮೇತ ಅವರ ಕುಕೃತ್ಯವನ್ನು ಬಯಲಿಗೆಳೆಯಬೇಕೆಂದು ಮಹಿಳೆ ಶಾಸಕ ಕೊನೇಟಿ ಆದಿಮೂಲಂ ಅವರಿದ್ದ ತಿರುಪತಿಯ ಹೋಟೆಲ್​ಗೆ ಹೋಗಿದ್ದಾಳೆ. ಹೋಗುವಾಗ ಜೊತೆಯಲ್ಲಿ ಮೂರನೇ ಬಾರಿ ಪೆನ್ ಕ್ಯಾಮೆರಾ ತೆಗೆದುಕೊಂಡು ಹೋಗಿದ್ದಾಳೆ. ಅಲ್ಲಿ ಆದಿಮೂಲಂ ಅವರ ರಾಸಲೀಲೆಯನ್ನು ರೆಕಾರ್ಡ್ ಮಾಡಿ ಅದನ್ನು ತನ್ನ ಪತಿಗೆ ನೀಡಿರುವುದಾಗಿ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಸಂತ್ರಸ್ತೆ, ಮುಖ್ಯಮಂತ್ರಿ ಚಂದ್ರಬಾಬು ಬಾಬು ನಾಯ್ಡು ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಶಾಸಕ ಅದಿಮುಲಂ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ತನ್ನ ಮತ್ತು ತನ್ನ ಕುಟುಂಬವನ್ನು ರಕ್ಷಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಇನ್ನು ಘಟನೆ ಬಗ್ಗೆ ಶಾಸಕ ಆದಿಮೂಲಂ ಪ್ರತಿಕ್ರಿಯಿಸಿದ್ದು, ಆ ವಿಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ, ಮಾರ್ಫ್ ಮಾಡಿರಬಹುದು. ಜನರಿಗಾಗಿ ನಿಸ್ವಾರ್ಥವಾಗಿ ದುಡಿದ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಆ ವಿಡಿಯೋ ಹೇಗೆ ಬಂತು ಎಂದು ದೇವರಿಗೆ ಗೊತ್ತು ಎಂದು ಹೇಳಿದ್ದಾರೆ.

ಹಿಂದೆ ವೈಎಸ್‌ಆರ್‌ಸಿಪಿಯಲ್ಲಿದ್ದ ಕೊನೇಟಿ ಆದಿಮೂಲಂ ಚುನಾವಣೆಗೂ ಮುನ್ನ ಟಿಡಿಪಿ ಸೇರಿದ್ದರು. ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸುವುದಕ್ಕೆ ಪಕ್ಷದಲ್ಲೇ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ, ಚಂದ್ರಬಾಬು ನಾಯ್ಡು ಅವರಿಗೆ ಟಿಕೆಟ್ ನೀಡಿದರು.

ಈ ಸುದ್ದಿಯನ್ನೂ ಓದಿ: Physical Abuse: ಪಾಪಿ ತಂದೆಯಿಂದ 14 ವರ್ಷದ ಮಗಳ ಮೇಲೆ ನಿರಂತರ ಅತ್ಯಾಚಾರ, ಬಸಿರಿನಿಂದ ಕೃತ್ಯ ಬಯಲು