Tuesday, 5th November 2024

ಗಗನಸಖಿಗೆ ಲೈಂಗಿಕ ಕಿರುಕುಳ: ಓರ್ವನ ಬಂಧನ

ಮೃತಸರ: ಕುಡಿದ ಅಮಲಿನಲ್ಲಿ ದುಬೈ-ಅಮೃತಸರ ವಿಮಾನದಲ್ಲಿ ಗಗನಸಖಿಯೊಬ್ಬ ರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪುರುಷ ಪ್ರಯಾಣಿಕನನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಜಾಬ್ನ ಜಲಂಧರ್‌ನ ಕೋಟ್ಲಿ ಗ್ರಾಮದ ರಾಜಿಂದರ್ ಸಿಂಗ್ ಗಗನಸಖಿಯೊಂದಿಗೆ ತೀವ್ರ ವಾಗ್ವಾದಕ್ಕೆ ಇಳಿದು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿ ದ್ದಾರೆ.

‘ಏರ್ ಹೋಸ್ಟೆಸ್ ಈ ಘಟನೆಯನ್ನು ಸಿಬ್ಬಂದಿಯ ಗಮನಕ್ಕೆ ತಂದರು. ಆರೋಪಿ ಕುಡಿದ ಮತ್ತಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಸಿಬ್ಬಂದಿ ಸದಸ್ಯರು ಈ ವಿಷಯದ ಬಗ್ಗೆ ಅಮೃತಸರ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು ಮತ್ತು ವಿಮಾನಯಾನದ ಸಹಾಯಕ ಭದ್ರತಾ ವ್ಯವಸ್ಥಾಪಕರು ಪೊಲೀಸ್ ದೂರು ದಾಖಲಿಸಿದರು.

ಶ್ರೀ ಗುರು ರಾಮದಾಸ್ ಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.