Saturday, 14th December 2024

ಶಾಹೀನ್’ಭಾಗ್’ನಲ್ಲಿ ತೆರವು ಕಾರ್ಯಾಚರಣೆ: ನೂರಾರು ಮಹಿಳೆಯರ ಧರಣಿ

ನವದೆಹಲಿ: ಶಾಹೀನ್ ಭಾಗ್ ನಲ್ಲಿ ಸೋಮವಾರ ಬುಲ್ದೇಜರ್ ನೊಂದಿಗೆ ಎಸ್ ಡಿಎಂಸಿ ಅಧಿಕಾರಿಗಳು ಸ್ಥಳಕ್ಕೆ ತೆರಳು ತ್ತಿದ್ದಂತೆಯೇ ಮಹಿಳೆಯರು ಸೇರಿದಂತೆ ನೂರಾರು ಮಹಿಳೆಯರು ಧರಣಿ ಆರಂಭಿಸಿದರು.

ಬಿಜೆಪಿ ಆಡಳಿತ ನಡೆಸುತ್ತಿರುವ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ಕಾರರು ಘೋಷಣೆ ಕೂಗಿ, ಒತ್ತುವರಿ ತೆರವು ಕಾರ್ಯಚರಣೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.

ಡಿಸೆಂಬರ್ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಶಾಹೀನ್ ಭಾಗ್ ಪ್ರತಿಭಟನೆ ಕೇಂದ್ರವಾಗಿತ್ತು. ಕೋವಿಡ್ -19 ಸಾಂಕ್ರಾಮಿಕ ದಿಂದಾಗಿ ಮಾರ್ಚ್ 2020 ರಿಂದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.

ಅಕ್ರಮ ಒತ್ತುವರಿ ತೆರವುಗೊಳಿಸಲು ಶಾಹೀನ್ ಭಾಗ್ ಬುಲ್ಡೇಜರ್, ಟ್ರಕ್ ಮತ್ತು ಪೊಲೀಸರೊಂದಿಗೆ ನಮ್ಮ ತಂಡ ಶಾಹೀನ್ ಭಾಗ್ ತೆರಳಿದೆ. ಒತ್ತುವರಿ ತೆರವು ನಮ್ಮ ಕಡ್ಡಾಯ ಕರ್ತವ್ಯವಾಗಿದೆ ಎಂದು ಎಸ್ ಡಿಎಂಸಿ ಕೇಂದ್ರ ವಲಯದ ಮುಖ್ಯಸ್ಥ ರಾಜ್ ಪಾಲ್ ಸಿಂಗ್ ತಿಳಿಸಿದ್ದಾರೆ.

ಶಾಹೀನ್ ಭಾಗ್ ಪ್ರದೇಶದಲ್ಲಿ ಒತ್ತುವರಿ ತೆರವು ಕಾರ್ಯಚರಣೆಗಾಗಿ ಎಸ್ ಡಿಎಂಸಿ ಅಧಿಕಾರಿಗಳಿಗೆ ಭದ್ರತೆ ಒದಗಿಸಲು ಪೊಲೀಸ ರೊಂದಿಗೆ ಹಿರಿಯ ಅಧಿಕಾರಿಗಳು ಕೂಡಾ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ.