ಮುಂಬೈ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ಭರ್ಜರಿ ವಹಿವಾಟಿನ ಪರಿಣಾಮ ಗುರುವಾರ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 255 ಅಂಕಗಳ ಏರಿಕೆಯೊಂದಿಗೆ ದಾಖಲೆ ಪ್ರಮಾಣದೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ.
ಮುಂಬೈ ಷೇರುಪೇಟೆಯ ಬಿಎಸ್ ಇ ಸೆನ್ಸೆಕ್ಸ್ 254.75 ಅಂಕಗಳ ಏರಿಕೆಯೊಂದಿಗೆ ದಾಖಲೆ ಪ್ರಮಾಣದ 53,158.85 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಎನ್ ಎಸ್ ಇ ನಿಫ್ಟಿ 70.25 ಅಂಕ ಏರಿಕೆಯಾಗಿದ್ದು, ದಾಖಲೆ ಪ್ರಮಾಣದ 15,924.20ರ ಗಡಿ ತಲುಪಿದೆ. ಮಧ್ಯಂತರ ನಿಫ್ಟಿ ವಹಿವಾಟಿನಲ್ಲಿ 15,952.35ರ ಗಡಿ ದಾಟಿತ್ತು.
ಸೆನ್ಸೆಕ್ಸ್ ಭರ್ಜರಿ ಏರಿಕೆಯಿಂದ ಎಚ್ ಸಿಎಲ್, ಎಲ್ ಆಯಂಡ್ ಟಿ, ಟೆಕ್ ಮಹೀಂದ್ರ, ಎಚ್ ಡಿಎಫ್ ಸಿ ಬ್ಯಾಂಕ್, ಆಲ್ಟ್ರಾ ಟೆಕ್ ಸಿಮೆಂಟ್, ಐಟಿಸಿ ಮತ್ತು ಟಾಟಾ ಸ್ಟೀಲ್ ಷೇರುಗಳು ಲಾಭಗಳಿಸಿದೆ.