Friday, 13th December 2024

ಸಕಾರಾತ್ಮಕ ಆರಂಭ: ಷೇರುಪೇಟೆ ಸೆನ್ಸೆಕ್ಸ್ 165 ಪಾಯಿಂಟ್ಸ್ ಜಿಗಿತ

ಮುಂಬೈ: ಭಾರತೀಯ ಷೇರುಪೇಟೆ ಗುರುವಾರ ಸಕಾರಾತ್ಮಕ ಆರಂಭ ಪಡೆದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 165 ಪಾಯಿಂಟ್ಸ್ ಜಿಗಿತ ಹಾಗೂ ರಾಷ್ಟ್ರೀಯ ಷೇರುಪೇಟೆ ನಿಫ್ಟಿ 50 ಪಾಯಿಂಟ್ಸ್‌ ಹೆಚ್ಚಾಗಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 160 ಪಾಯಿಂಟ್ಸ್‌ ಏರಿಕೆಗೊಂಡು 52102.51 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 50.80 ಪಾಯಿಂಟ್ಸ್‌ ಅಥವಾ ಶೇಕಡಾ 0.32ರಷ್ಟು ಹೆಚ್ಚಾಗಿ 15689.20 ಪಾಯಿಂಟ್ಸ್‌ ಮುಟ್ಟಿದೆ. ವಹಿವಾಟು ಆರಂಭ ಗೊಂಡಾಗ 1559 ಷೇರುಗಳು ಏರಿಕೆಗೊಂಡರೆ, 266 ಷೇರುಗಳು ಕುಸಿದವು.

ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರುಗಳು 10 ರೂ.ಗಳ ಏರಿಕೆ ಕಂಡು 707.35 ರೂ., ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು 3 ರೂ.ಗಳ ಏರಿಕೆ ಕಂಡು 245.50 ರೂ., ಟೆಕ್ ಮಹೀಂದ್ರಾ ಷೇರುಗಳು ಸುಮಾರು 15 ರೂ.ಗಳ ಲಾಭದೊಂದಿಗೆ 1,067.00 ರೂ., ವಿಪ್ರೊ ಷೇರು ಸುಮಾರು 7 ರೂ.ಗಳ ಲಾಭದೊಂದಿಗೆ 551.10 ರೂ., ಶ್ರೀ ಸಿಮೆಂಟ್‌ನ ಷೇರು 337 ರೂ.ಗಳ ಏರಿಕೆ ಕಂಡು 28,743.95 ರೂ. ತಲುಪಿದೆ.