Saturday, 14th December 2024

ಕುಸಿತದೊಂದಿಗೆ ವಹಿವಾಟು ಆರಂಭಿಸಿದ ಸೆನ್ಸೆಕ್ಸ್, ನಿಫ್ಟಿ

ಮುಂಬೈ/ನವದೆಹಲಿ: ಭಾರತೀಯ ಷೇರು ಮಾರುಕಟ್ಟೆ ಮತ್ತೆ ಇಳಿಮುಖದೊಂದಿಗೆ ವಹಿವಾಟು ಪ್ರಾರಂಭವಾಯಿತು. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 536 ಪಾಯಿಂಟ್ಸ್‌ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 181 ಪಾಯಿಂಟ್ಸ್‌ ಇಳಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 536 ಪಾಯಿಂಟ್ಸ್‌ ಕುಸಿದು 48,681 ಪಾಯಿಂಟ್ಸ್‌ಗೆ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 181 ಪಾಯಿಂಟ್ಸ್ ಕುಸಿದು 14,377 ಪಾಯಿಂಟ್ಸ್‌ಗೆ ತಲುಪಿದೆ.

ಬಿಎಸ್‌ಇಯಲ್ಲಿ ಒಟ್ಟು 1383 ಕಂಪನಿಗಳಲ್ಲಿ ವಹಿವಾಟು ಆರಂಭವಾಗಿದ್ದು, ಈ ಪೈಕಿ 340 ಷೇರುಗಳು ಏರಿಕೆ ಕಂಡಿವೆ.

ಕೋಟಕ್ ಬ್ಯಾಂಕ್, ಭಾರ್ತಿ ಏರ್‌ಟೆಲ್ ಮತ್ತು ಪವರ್‌ಗ್ರಿಡ್ ಷೇರುಗಳು ಏರಿಕೆ ಸಾಧಿಸಿವೆ.