Saturday, 23rd November 2024

ಹಣದುಬ್ಬರ, ಲಾಕ್‌ಡೌನ್‌, ಉಕ್ರೇನ್ ಯುದ್ಧ: ಷೇರು ಮಾರುಕಟ್ಟೆ ಪಾತಾಳಕ್ಕೆ

ಮುಂಬೈ: ಭಾರತೀಯ ಷೇರುಗಳ ಗುರುವಾರ ಆರಂಭಿಕ ವಹಿವಾಟಿನಲ್ಲೇ ತೀವ್ರವಾಗಿ ಕುಸಿತ ಕಂಡಿದೆ. ಜಾಗತಿಕ ಹಣದುಬ್ಬರ, ಚೀನಾದಲ್ಲಿ ಲಾಕ್‌ಡೌನ್‌ ಹಾಗೂ ಉಕ್ರೇನ್ ಯುದ್ಧದ ನಡುವೆ ಷೇರು ಮಾರುಕಟ್ಟೆಯು ಪಾತಾ ಳಕ್ಕೆ ಇಳಿದಿದೆ.

30-ಷೇರು ಬಿಎಸ್‌ಇ ಸೆನ್ಸೆಕ್ಸ್ 1,106 ಪಾಯಿಂಟ್‌ಗಳು ಕುಸಿದು 53,103 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 314 ಪಾಯಿಂಟ್ ಕುಸಿದು 15,926 ಕ್ಕೆ ಕುಸಿದು ವಹಿವಾಟು ಆರಂಭ ಮಾಡಿದೆ. ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಆರಂಭಿಕವಾಗಿಯೇ ನಷ್ಟ ಕಂಡಿದೆ. ನಿಫ್ಟಿ ಐಟಿ ಮತ್ತು ನಿಫ್ಟಿ ಮೆಟಲ್ ಕ್ರಮವಾಗಿ ಶೇಕಡಾ 3.25 ಮತ್ತು 3.01 ರಷ್ಟು ಕುಸಿದಿದೆ.

ಟೆಕ್ ಮಹೀಂದ್ರಾ ಭಾರೀ ನಷ್ಟದೊಂದಿಗೆ ವಹಿವಾಟು ಆರಂಭ ಮಾಡಿದೆ. ಟೆಕ್ ಮಹೀಂದ್ರಾ ಷೇರುಗಳು ಶೇ.3.72 ರಷ್ಟು ಕುಸಿದು ರೂಪಾಯಿ 1,128.40 ಕ್ಕೆ ತಲುಪಿದೆ. ಬಿಎಸ್‌ಇಯಲ್ಲಿ 2,147 ಷೇರುಗಳು ಕುಸಿತ ಕಂಡರೆ 459 ಷೇರುಗಳು ಮುನ್ನಡೆ ಸಾಧಿಸಿದೆ.

ಆರಂಭಿಕ ವಹಿವಾಟಿನಲ್ಲಿ ಎಲ್‌ಐಸಿ ಷೇರುಗಳು ಕುಸಿತ ಕಂಡಿದೆ. 1.44 ಶೇಕಡ ಕುಸಿತ ಕಂಡು ರೂಪಾಯಿ 863.65 ಕ್ಕೆ ತಲುಪಿದೆ. ಎಲ್‌ಐಸಿ ಮಂಗಳವಾರ ಷೇರು ಮಾರುಕಟ್ಟೆಯಲ್ಲಿ ನೀರಸ ಚೊಚ್ಚಲ ಪ್ರವೇಶವನ್ನು ಮಾಡಿದೆ.