ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಮಂಗಳವಾರ ಸಕಾರಾತ್ಮಕ ಆರಂಭ ಪಡೆದು ಸಾಕಷ್ಟು ಏರಿಳಿತಗಳ ನಡುವೆ ದಿನದ ವಹಿವಾಟು ಅಂತ್ಯಕ್ಕೆ ಕೊಂಚ ಇಳಿಕೆಗೊಂಡಿದೆ. ಸೆನ್ಸೆಕ್ಸ್ 2.56 ಪಾಯಿಂಟ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ 7.90 ಪಾಯಿಂಟ್ಸ್ ಕುಸಿದಿದೆ.
ಬಿಎಸ್‌ಇ ಸೆನ್ಸೆಕ್ಸ್ 2.56 ಪಾಯಿಂಟ್ಸ್ ಕುಸಿತದೊಂದಿಗೆ 51934.88 ಪಾಯಿಂಟ್, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 7.90 ಪಾಯಿಂಟ್ ಇಳಿಕೆಗೊಂಡು 15574.90 ಪಾಯಿಂಟ್‌ಗಳ ಕುಸಿತ ಕಂಡಿದೆ. ಬಿಎಸ್‌ಇಯಲ್ಲಿ ಇಂದು ಒಟ್ಟು 3,470 ಕಂಪನಿಗಳು ವಹಿವಾಟು ನಡೆಸಿದ್ದು, ಈ ಪೈಕಿ ಸುಮಾರು 1,303 ಷೇರುಗಳು ಏರಿಕೆ ಗೊಂಡರೆ, 1,782 ಷೇರುಗಳು ಕುಸಿದಿವೆ.
ಅದಾನಿ ಪೋರ್ಟ್ಸ್, ಒಎನ್‌ಜಿಸಿ, ಬಜಾಜ್ ಫೈನಾನ್ಸ್, ಎಸ್‌ಬಿಐ ಮತ್ತು ಬಜಾಜ್ ಆಟೋಗಳು ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್, ಐಸಿಐಸಿಐ ಬ್ಯಾಂಕ್ ಮತ್ತು ಗ್ರಾಸಿಮ್ ಇಂಡಸ್ಟ್ರೀಸ್ ನಷ್ಟಗೊಂಡಿವೆ. ಭಾರತೀಯ ರೂಪಾಯಿ 28 ಪೈಸೆ ಕುಸಿತಗೊಂಡು 72.90 ರೂಪಾಯಿಗೆ ತಲುಪಿದೆ.