Saturday, 14th December 2024

ಷೇರುಪೇಟೆಯ ನಕಾರಾತ್ಮಕ ಆರಂಭ

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಮಂಗಳವಾರ ನಕಾರಾತ್ಮಕ ಆರಂಭ ಪಡೆದಿದ್ದು, ಸಮತಟ್ಟಾಗಿ ಮುಂದುವರಿದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 160 ಪಾಯಿಂಟ್ಸ್ ಇಳಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ52 ಪಾಯಿಂಟ್ಸ್ ಕುಸಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 160 ಪಾಯಿಂಟ್ಸ್ ಇಳಿಕೆಗೊಂಡು 52576 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 52 ಪಾಯಿಂಟ್ಸ್‌ ಕುಸಿದು 15760 ಪಾಯಿಂಟ್ಸ್‌ ಮುಟ್ಟಿದೆ.

ಟೈಟಾನ್ ಕಂಪನಿಯ ಷೇರು ಸುಮಾರು 13 ರೂ.ಗಳ ಲಾಭದೊಂದಿಗೆ 1,740.95 ರೂ., ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು ಸುಮಾರು 1 ರೂ.ಗಳಷ್ಟು ಏರಿಕೆಯಾಗಿ 232.35 ರೂ., ದೇವಿ ಲ್ಯಾಬ್ಸ್‌ನ ಷೇರುಗಳು 18 ರೂ.ಗಳ ಏರಿಕೆ ಕಂಡು 4,332.70 ರೂ. ತಲುಪಿದೆ.

ಐಸಿಐಸಿಐ ಬ್ಯಾಂಕಿನ ಷೇರುಗಳು 5 ರೂ.ಗಳ ಕುಸಿತ ಕಂಡು 645.80 ರೂ., ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು ಸುಮಾರು 5 ರೂ.ಗಳಷ್ಟು ಇಳಿಕೆಯಾಗಿ 789.00 ರೂ., ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರುಗಳು ಸುಮಾರು 6 ರೂ.ಗಳಷ್ಟು ಇಳಿಕೆಯಾಗಿ 688.95 ರೂ., ಇನ್ಫೋಸಿಸ್ ಷೇರುಗಳು ಸುಮಾರು 8 ರೂ.ಗಳಷ್ಟು ಇಳಿಕೆಯಾಗಿ 1,564.00 ರೂ. ಮುಟ್ಟಿದೆ.