Friday, 13th December 2024

ಷೇರುಪೇಟೆಯ ಸೆನ್ಸೆಕ್ಸ್: 125.13 ಅಂಕ ಏರಿಕೆ

ಮುಂಬೈ: ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಸೋಮವಾರ 125.13 ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಸಾರ್ವಕಾಲಿಕ ಏರಿಕೆಯಲ್ಲಿ ಮುಕ್ತಾಯಗೊಳಿಸಿದೆ.

ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 125.13 ಅಂಕಗಳ ಏರಿಕೆಯೊಂದಿಗೆ 54,402.85 ಅಂಕಗಳ ಮಟ್ಟದಲ್ಲಿ, ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 20.10 ಅಂಕಗಳ ಏರಿಕೆಯೊಂದಿಗೆ 16,258.30 ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಮಹೀಂದ್ರಾ ಆಯಂಡ್ ಮಹೀಂದ್ರಾ, ಟೆಕ್ ಮಹೀಂದ್ರಾ, ಆಯಕ್ಸಿಸ್ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಲಾಭ ಗಳಿಸಿದೆ. ಟಾಟಾ ಸ್ಟೀಲ್, ಎನ್ ಟಿಪಿಸ, ಭಾರ್ತಿ ಏರ್ ಟೆಲ್, ಪಿಎಸ್ ಯು ಬ್ಯಾಂಕ್, ಆಟೋ ಷೇರುಗಳು ನಷ್ಟ ಕಂಡಿದೆ.

ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಬೆಳಗ್ಗೆ 219.52 ಅಂಕಗಳಷ್ಟು ಏರಿಕೆಯೊಂದಿಗೆ 54,492.24 ಅಂಕಗಳೊಂದಿಗೆ, ಎನ್ ಎಸ್ ಇ ನಿಫ್ಟಿ 65.05 ಅಂಶ ಏರಿಕೆಯೊಂದಿಗೆ 16,303.25 ಅಂಕಗಳ ಮುನ್ನಡೆಯೊಂದಿಗೆ ವಹಿವಾಟು ನಡೆಸಿತ್ತು.