Saturday, 14th December 2024

ಸಕಾರಾತ್ಮಕ ಆರಂಭ ಪಡೆದ ಬಿಎಸ್‌ಇ ಸೆನ್ಸೆಕ್ಸ್

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಮಂಗಳವಾರ ಸಕಾರಾತ್ಮಕ ಆರಂಭ ಪಡೆದಿದೆ.

ಬಿಎಸ್‌ಇ ಸೆನ್ಸೆಕ್ಸ್ 172.76 ಪಾಯಿಂಟ್‌ಗಳ ಏರಿಕೆ ಕಂಡು 52110.20 ಪಾಯಿಂಟ್‌ಗಳ ಮಟ್ಟದಲ್ಲಿ, ಎನ್‌ಎಸ್‌ಇ ನಿಫ್ಟಿ 48.50 ಪಾಯಿಂಟ್ ಗಳಿಕೆಯೊಂದಿಗೆ 15631.30ಕ್ಕೆ ಪ್ರಾರಂಭವಾಯಿತು.

ಬಿಎಸ್‌ಇಯಲ್ಲಿ ಒಟ್ಟು 2,188 ಕಂಪನಿಗಳಲ್ಲಿ ವಹಿವಾಟು ಪ್ರಾರಂಭವಾಗಿದ್ದು, ಸುಮಾರು 1,535 ಷೇರುಗಳು ಏರಿಕೆಗೊಂಡರೆ, 578 ಕುಸಿತದೊಂದಿಗೆ ತೆರೆದಿವೆ. ಅದೇ ಸಮಯದಲ್ಲಿ, 75 ಕಂಪನಿಗಳ ಷೇರು ಬೆಲೆ ಯಾವುದೇ ಬದಲಾವಣೆ ಆಗಿಲ್ಲ.

ಬಜಾಜ್ ಆಟೋ ಷೇರು ಸುಮಾರು 128 ರೂ ಗಳಿಸಿ 4,321.10 ರೂ., ಟಾಟಾ ಮೋಟಾರ್ಸ್‌ನ ಷೇರು ಸುಮಾರು 6 ರೂ.ಗಳ ಲಾಭ ದೊಂದಿಗೆ 324.30 ರೂ., ಎಚ್‌ಡಿಎಫ್‌ಸಿ ಷೇರುಗಳು 36 ರೂ.ಗಳ ಏರಿಕೆ ಕಂಡು 2,588.90 ರೂ., ಒಎನ್‌ಜಿಸಿಯ ಷೇರು ಸುಮಾರು 1 ರೂ.ಗಳ ಲಾಭದೊಂದಿಗೆ 114.85 ರೂ., ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು 13 ರೂ.ಗಳ ಏರಿಕೆ ಕಂಡು 1,026.00 ರೂ. ತಲುಪಿದೆ.