ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಸೆನ್ಸೆಕ್ಸ್ 97 ಪಾಯಿಂಟ್ಸ್ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 36 ಪಾಯಿಂಟ್ಸ್ ಹೆಚ್ಚಾಗಿದೆ.
ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 97.70 ಪಾಯಿಂಟ್ಸ್ ಏರಿಕೆಗೊಂಡು 51115.22, ಎನ್ಎಸ್ಇ ಸೂಚ್ಯಂಕ ನಿಫ್ಟಿ 36,40 ಪಾಯಿಂಟ್ಸ್ ಏರಿಕೆಗೊಂಡು 15337.90 ಮುಟ್ಟಿದೆ. ನಿಫ್ಟಿ ಬ್ಯಾಂಕ್ 410.85 ಪಾಯಿಂಟ್ಸ್ ಹೆಚ್ಚಿ, 35095.05 ತಲುಪಿದೆ.
ಸಿಮೆಂಟ್ಸ್, ಎಸ್ಬಿಐ, ಆಯಕ್ಸಿಸ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ವಿಪ್ರೊ ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿದ್ದು, ಎಚ್ಡಿಎಫ್ಸಿ, ಒಎನ್ಜಿಸಿ, ಐಒಸಿ, ಬಜಾಜ್ ಫೈನಾನ್ಸ್ ಮತ್ತು ಎಚ್ಯುಎಲ್ ನಷ್ಟ ಅನುಭವಿಸದ ಷೇರು ಗಳಾಗಿವೆ.
ಫಾರ್ಮಾ ಮತ್ತು ಎನರ್ಜಿ ಹೊರತುಪಡಿಸಿ, ಇತರ ವಲಯ ಸೂಚ್ಯಂಕಗಳು ನಿಫ್ಟಿ ಬ್ಯಾಂಕ್, ಐಟಿ ಮತ್ತು ಪಿಎಸ್ಯು ಬ್ಯಾಂಕ್ ಸೂಚ್ಯಂಕಗಳು ಶೇಕಡಾ 1 ರಿಂದ 2ರಷ್ಟು ಹೆಚ್ಚಾಗಿವೆ. ಭಾರತೀಯ ರೂಪಾಯಿ ಮೌಲ್ಯವು 19 ಪೈಸೆ ಏರಿಕೆಯಾಗಿ ಪ್ರತಿ ಡಾಲರ್ಗೆ 72.58 ಕ್ಕೆ ತಲುಪಿದೆ.