Friday, 13th December 2024

ಸೆನ್ಸೆಕ್ಸ್ 397 ಪಾಯಿಂಟ್ಸ್, ನಿಫ್ಟಿ 101 ಪಾಯಿಂಟ್ಸ್ ಇಳಿಕೆ

ನವದೆಹಲಿ/ಮುಂಬೈ: ಭಾರತೀಯ ಷೇರುಪೇಟೆ ಸೋಮವಾರ ಇಳಿಮುಖದೊಂದಿಗೆ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 397 ಪಾಯಿಂಟ್ಸ್‌ ಕುಸಿತಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 101 ಪಾಯಿಂಟ್ಸ್ ಇಳಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 397 ಪಾಯಿಂಟ್ಸ್ ಕುಸಿತಗೊಂಡು 50,395 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 101.45 ಪಾಯಿಂಟ್ಸ್‌ ಕುಸಿದು 14,929.50 ಪಾಯಿಂಟ್ಸ್‌ಗೆ ತಲುಪಿದೆ. 207 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ ಆರಂಭಿಕ ಲಾಭವನ್ನು ವಿಸ್ತರಿಸಿದೆ ಮತ್ತು ಪ್ರತಿ ಡಾಲರ್‌ಗೆ 33 ಪೈಸೆ ಏರಿಕೆಯಾಗಿ 72.48ಕ್ಕೆ ತಲುಪಿದೆ.