ಮುಂಬೈ/ನವದೆಹಲಿ: ಭಾರತೀಯ ಷೇರು ಸೂಚ್ಯಂಕಗಳು ಗುರುವಾರ ಕುಸಿತದೊಂದಿಗೆ ಆರಂಭಗೊಂಡಿದ್ದು, ನಿಫ್ಟಿ 14200 ಕ್ಕಿಂತ ಕಡಿಮೆಯಾಗಿದೆ. ಮುಂಬೈ ಷೇರುಪೇಟೆ 466 ಅಂಕಗಳಷ್ಟು ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 136 ಪಾಯಿಂಟ್ಸ್ ಕುಸಿದಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 466.41 ಪಾಯಿಂಟ್ಸ್ ಇಳಿಕೆಗೊಂಡು 47,239.39 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 136.90 ಪಾಯಿಂಟ್ ತಗ್ಗಿದ್ದು 14,159.50 ಪಾಯಿಂಟ್ಸ್‌ಗೆ ಇಳಿಕೆಗೊಂಡಿದೆ. ಆರಂಭಿಕ ವಹಿವಾಟಿನಲ್ಲಿ 430 ಷೇರುಗಳು ಏರಿಕೆಗೊಂಡರೆ, 427 ಷೇರುಗಳು ಕುಸಿದವು ಮತ್ತು 94 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಭಾರತೀಯ ರೂಪಾಯಿ ಕೋವಿಡ್ -19 ಪ್ರಕರಣಗಳ ಹೆಚ್ಚಳ ಮತ್ತು ರಾಜ್ಯ ಲಾಕ್‌ಡೌನ್‌ಗಳ ಮಧ್ಯೆ ಋಣಾತ್ಮಕ ಆರಂಭ ಪಡೆದಿದೆ. ಕಳೆದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 75.14 ರೂ. ತಲುಪಿದೆ.