Saturday, 23rd November 2024

58,130 ಅಂಕಗಳ ವಹಿವಾಟು ನಡೆಸಿದ ಷೇರುಪೇಟೆ

share Market

ಮುಂಬೈ: ಮುಂಬೈ ಷೇರುಪೇಟೆ ಶುಕ್ರವಾರ ಸಾರ್ವಕಾಲಿಕ ಗರಿಷ್ಠ ಅಂಕಗಳಲ್ಲಿ ವಹಿವಾಟನ್ನು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 277 ಅಂಕ ಏರಿಕೆಯೊಂದಿಗೆ ದಾಖಲೆಯ 58,130 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಂಡಿದೆ.

ಎನ್ ಎಸ್ ಇ ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 17,320 ಅಂಕಗಳೊಂದಿಗೆ ದಾಖಲೆಯ ವಹಿವಾಟು ನಡೆಸಿದೆ. ಬೆಳಗ್ಗೆ ಭರ್ಜರಿ ವಹಿವಾಟಿನ ಪರಿಣಾಮ ಸೆನ್ಸೆಕ್ಸ್ ಸೂಚ್ಯಂಕ 250ಕ್ಕೂ ಅಧಿಕ ಅಂಕ ಏರಿಕೆ ಕಂಡಿತ್ತು.

ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆಯಿಂದ ರಿಲಯನ್ಸ್ ಇಂಡಸ್ಟ್ರೀಸ್, ಟೈಟಾನ್ ಕಂಪನಿ, ಬಜಾಜ್ ಆಟೋ, ಟಾಟಾ ಸ್ಟೀಲ್, ಮಾರುತಿ ಸುಜುಕಿ, ಡಾ.ರೆಡ್ಡೀಸ್ ಲ್ಯಾಬೋರೇಟರಿ, ಏಷ್ಯನ್ ಪೇಂಟ್ಸ್ ಷೇರುಗಳು ಶೇ.4ಕ್ಕಿಂತಲೂ ಅಧಿಕ ಲಾಭಗಳಿಸಿದೆ.