ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ 264.56 ಅಂಕ ಏರಿಕೆಯಾಗಿ 58,615.09 ತಲುಪಿ ವಹಿವಾಟು ಆರಂಭಿಸಿದೆ. ಎನ್‌ಎಸ್‌ಇ ನಿಫ್ಟಿ ಶೇಕಡ 0.45ರಷ್ಟು ಹೆಚ್ಚಾಗಿ 17,465.65ಕ್ಕೆ ತಲುಪಿದೆ. ನಿಫ್ಟಿ ಐಟಿ ಸೂಚ್ಯಂಕ ಬೆಸ್ಟ್ ಸೆಕ್ಟರ್ ಆಗಿದೆ. ಆರಂಭಿಕ ವಹಿವಾಟಿನಲ್ಲಿ ನಿಫ್ಟಿ ಐಟಿ ಸೂಚ್ಯಂಕ ಶೇಕಡ ಒಂದಕ್ಕಿಂತ ಅಧಿಕ ಏರಿಕೆಯಾಗಿದೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 214.17 ಅಂಕ ಅಥವಾ ಶೇಕಡ 0.37ರಷ್ಟು ಏರಿಕೆಯಾಗಿ 58,350.53ಕ್ಕೆ ವಹಿವಾಟು ಅಂತ್ಯ ಮಾಡಿದೆ. ನಿಫ್ಟಿ 42.70 ಅಂಕ ಅಥವಾ ಶೇಕಡ 0.25 ರಷ್ಟು ಏರಿ 17,388.20ಕ್ಕೆ ವಹಿವಾಟು ಕೊನೆ ಮಾಡಿದೆ. 1337 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1934 ಷೇರುಗಳು ಇಳಿಕೆಯಾಗಿದೆ.
ಹಿಂಡಾಲ್ಕೊ ಟಾಪ್ ಸ್ಟಾಕ್ ಆಗಿದೆ. ಹಿಂಡಾಲ್ಕೊ ಷೇರುಗಳು ಶೇಕಡ 3.62ರಷ್ಟು ಏರಿಕೆ ಯಾಗಿ ರೂಪಾಯಿ 429.25ಕ್ಕೆ ತಲುಪಿದೆ. ನಿಫ್ಟಿಯಲ್ಲಿ ಇನ್ಫೋಸಿಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫೈನಾನ್ಸ್, ಲಾರ್ಸೆನ್, ಅದಾನಿ ಪೋರ್ಟ್ಸ ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳಾದರೆ, ರಿಲಯನ್ಸ್, ಎಸ್‌ಬಿಐ, ಟಾಟಾ ಕನ್ಸ್ಯೂಮರ್ ಪ್ರೋಡೆಕ್ಟ್ಸ್, ಟೈಟಾನ್ ಕಂಪನಿ, ಭಾರ್ತಿ ಏರ್‌ಟೆಲ್ ಸ್ಟಾಕ್‌ಗಳು ಕುಸಿತವಾಗಿದೆ.