Wednesday, 11th December 2024

ಷೇರುಪೇಟೆ ಸೆನ್ಸೆಕ್ಸ್ 460 ಪಾಯಿಂಟ್ಸ್‌ ಏರಿಕೆ, ನಿಫ್ಟಿಯಲ್ಲೂ ಹೆಚ್ಚಳ

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹಣಕಾಸು ನೀತಿ ಪರಿಶೀಲನೆ ಬಳಿಕ ಬುಧವಾರ ಭಾರತೀಯ ಷೇರುಪೇಟೆ ಜಿಗಿತ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 460 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 135 ಅಂಕಗಳು ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇ.0.94ರಷ್ಟು ಹೆಚ್ಚಳಗೊಂಡು, 49,661.76 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇ0.92ರಷ್ಟು ಏರಿಕೆಗೊಂಡು 14,819 ಪಾಯಿಂಟ್ಸ್‌ಗೆ ತಲುಪಿದೆ. 1,824 ಷೇರುಗಳು ಏರಿಕೆಗೊಂಡಿದ್ದು, 1,072 ಷೇರುಗಳು ಕುಸಿತಗೊಂಡಿವೆ. ಯಾವುದೇ ಬದಲಾವಣೆ ಆಗಿಲ್ಲ.

ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇ 0.8 ರಿಂದ 1.3 ರಷ್ಟು ಏರಿಕೆಯಾಗಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily