Thursday, 3rd October 2024

ಜೂ.29ರಂದು ಷೇರು ಮಾರುಕಟ್ಟೆಗೆ ರಜೆ

ನವದೆಹಲಿ: ಬಕ್ರೀದ್ ಪ್ರಯುಕ್ತ ಭಾರತದ ಷೇರು ಮಾರುಕಟ್ಟೆಗಳಿಗೂ ಬುಧವಾರ ರಜೆ ನಿಗದಿಯಾಗಿತ್ತು. ಆದರೆ, ರಜಾ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಜೂ.28 ಬದಲು ಮರುದಿನ ರಜೆ ಕೊಡಲು ನಿರ್ಧರಿಸಲಾಗಿದೆ. ಅಂದರೆ ಬುಧವಾರ ಯಥಾ ಪ್ರಕಾರ ಕಾರ್ಯನಿರ್ವಹಿಸಲಿದೆ.
ಬಾಂಬೆ ಸ್ಟಾಕ್ ಎಕ್ಸ್​ಚೇಂಜ್, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಮತ್ತಿತರ ಷೇರು ಎಕ್ಸ್​ಜೇಂಜ್ ಕೇಂದ್ರಗಳಿಗೆ ರಜೆ ಇದೆ. ವಿದೇಶೀ ಕರೆನ್ಸಿ ವಿನಿಮಯ ಮಾರುಕಟ್ಟೆಯೂ ಇರುವು ದಿಲ್ಲ. ಜೂ.29ರಂದು ಯಾವುದೇ ಷೇರು ವಹಿವಾಟು, ಬಾಂಡ್ ಮಾರಾಟ, ಫಾರೆಕ್ ವಹಿವಾಟುಗಳು ನಡೆಯುವುದಿಲ್ಲ.

ಬಹು ಸರಕು ವಿನಿಯಮ ಮಾರುಕಟ್ಟೆ ಎನಿಸಿದ ಎಂಸಿಎಕ್ಸ್ ಜೂನ್ 29ರಂದು ಸಂಜೆಯ ವರೆಗೂ ಬಂದ್ ಆಗಿರುತ್ತದೆ. ಸಂಜೆ 5ರ ಬಳಿಕ ಮಧ್ಯರಾತ್ರಿಯವರೆಗೂ ಅದು ತೆರೆದಿರು ತ್ತದೆ. ಕಮಾಡಿಟಿ ಡಿರೈವೇಟಿವ್ ಸೆಗ್ಮೆಂಟ್​ನಲ್ಲೂ ಸಂಜೆಯ ಬಳಿಕ ವಹಿವಾಟು ಇರುತ್ತದೆ.

ಷೇರು ಮಾರುಕಟ್ಟೆಗಳಿಗೆ ರಜಾ ದಿನಗಳ ಪಟ್ಟಿ

  • ಜೂನ್ 29: ಬಕ್ರೀದ್ ಹಬ್ಬ
  • ಆಗಸ್ಟ್ 15: ಸ್ವಾತಂತ್ರ್ಯೋತ್ಸವ
  • ಸೆಪ್ಟಂಬರ್ 19: ಗಣೇಶ ಹಬ್ಬ
  • ಅಕ್ಟೋಬರ್ 2: ಮಹಾತ್ಮ ಗಾಂಧಿ ಜಯಂತಿ
  • ಅಕ್ಟೋಬರ್ 24: ದಸರಾ ಹಬ್ಬ
  • ನವೆಂಬರ್ 14: ದೀಪಾವಳಿ ಹಬ್ಬ
  • ನವೆಂಬರ್ 27: ಗುರುನಾನಕ್ ಜಯಂತಿ
  • ಡಿಸೆಂಬರ್ 25: ಕ್ರಿಸ್ಮಸ್ ಹಬ್ಬ

ಮಂಗಳವಾರ ಭಾರತದ ಬಿಎಸ್​ಇ ಮತ್ತು ಎನ್​ಎಸ್​ಇ ಷೇರು ವಿನಿಮಯ ಕೇಂದ್ರಗಳು ಭರ್ಜರಿ ವಹಿವಾಟು ಕಾಣುತ್ತಿವೆ. ಸೆನ್ಸೆಕ್ಸ್ ಬೆಳಗ್ಗೆಯೇ 100 ಅಂಕಗಳನ್ನು ಹೆಚ್ಚಿಸಿಕೊಂಡಿದೆ. ಎನ್​ಎಸ್​ಇ ನಿಫ್ಟಿ ಸೂಚ್ಯಂಕ ಮತ್ತೆ 18,700 ಅಂಕಗಳ ಮಟ್ಟಕ್ಕಿಂತ ಮೇಲೇರಿದೆ.