Saturday, 23rd November 2024

ಷೇರು ಮಾರುಕಟ್ಟೆ: 14 ಲಕ್ಷ ಕೋಟಿ ರೂ.ಗಳ ಭಾರಿ ನಷ್ಟ

ವದೆಹಲಿ: ಬುಧವಾರದ ವಹಿವಾಟು ಅಧಿವೇಶನದಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಮಾರುಕಟ್ಟೆಯಲ್ಲಿ ಭಾರಿ ಮಾರಾಟದಿಂದಾಗಿ, ಹೂಡಿಕೆದಾರರು ಇಂದಿನ ಅಧಿವೇಶನದಲ್ಲಿ 14 ಲಕ್ಷ ಕೋಟಿ ರೂ.ಗಳ ಭಾರಿ ನಷ್ಟವನ್ನ ಅನುಭವಿಸಿದ್ದಾರೆ.

ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳ ಮಾರಾಟದೊಂದಿಗೆ ಮಾರುಕಟ್ಟೆಯಲ್ಲಿ ಕುಸಿತ ಪ್ರಾರಂಭವಾಯಿತು.

ಲಾರ್ಜ್ ಕ್ಯಾಪ್ ಷೇರುಗಳಲ್ಲಿ ಲಾಭದ ಬುಕಿಂಗ್ ಕಂಡುಬಂದಿದೆ. ಇಂದಿನ ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್ 924 ಪಾಯಿಂಟ್ಸ್ ಕುಸಿದು 72,743 ಪಾಯಿಂಟ್ಸ್ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ ಎಸ್ ಇ) ನಿಫ್ಟಿ 352 ಅಂಶ ಏರಿಕೆ ಕಂಡು 21,982 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್ 1150 ಮತ್ತು ನಿಫ್ಟಿ 430 ಅಂಕಗಳ ಕುಸಿತ ಕಂಡಿತ್ತು.