Saturday, 14th December 2024

ಜನರೇಟರ್ ಬೋಗಿಯಲ್ಲಿ ಬೆಂಕಿ: ಕೆಲ ಕಾಲ ಆತಂಕದ ಪರಿಸ್ಥಿತಿ

ಗಾಜಿಯಾಬಾದ್: ಶತಾಬ್ದಿ ಎಕ್ಸ್ ಪ್ರೆಸ್ ರೈಲಿನ ಜನರೇಟರ್ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಯಾಯಿತು.

ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಶನಿವಾರ ಶತಾಬ್ದಿ ಎಕ್ಸ್ ಪ್ರೆಸ್ ರೈಲು ಗಾಜಿಯಾಬಾದ್ ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಘಟನೆ ಸಂಭವಿಸಿತು. ಕೂಡಲೇ ಆ ಬೋಗಿಯನ್ನು ಪ್ರತ್ಯೇಕಿಸಲಾಗಿದ್ದು, ಹೆಚ್ಚಿನ ಅನಾಹುತವನ್ನು ತಪ್ಪಿಸಲಾಗಿದೆ.

ಜನರೇಟರ್ ಮತ್ತು ರೈಲಿನ ಲಗೇಜ್ ಇರುವ ಶತಾಬ್ದಿ ಎಕ್ಸ್ ಪ್ರೆಸ್’ನ ಕೊನೆಯ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಬೋಗಿಯನ್ನು ಪ್ರತ್ಯೇಕಿಕರಿಸಿ ನಂತರ ಬೆಂಕಿ ನಂದಿಸುವ ಕಾರ್ಯ ಮಾಡಲಾಗಿದೆ. ಬೋಗಿಯ ಬಾಗಿಲುಗಳು ಜಾಮ್ ಆದ ಕಾರಣ ಬಾಗಿಲುಗಳನ್ನು ಒಡೆದು ಬೆಂಕಿ ನಂದಿಸಲಾಗಿದೆ ಎಂದು ವರದಿಯಾಗಿದೆ.

ಘಟನೆಯಲ್ಲಿ ಸಾವು ನೋವು ಸಂಭವಿಸಿಲ್ಲ. ಮಾ.13ರಂದು ಡೆಹ್ರಾಡೂನ್- ದಿಲ್ಲಿ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.