ಕಂಕಾವ್ಲಿಯ ಶಾಸಕ ರಾಣೆ ಅವರು “ಯೇ ಪರ್ಫೆಕ್ಟ್ ಹೈ (ಇದು ಪರಿಪೂರ್ಣ ವಾಗಿದೆ)” ಎಂದು ಶೀರ್ಷಿಕೆ ನೀಡಿದ್ದಾರೆ.
ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯ ಎದುರಾಳಿಯಾಗಿ ಹೊರಹೊಮ್ಮಿರುವ ಕೇಜ್ರಿವಾಲ್, ಭಾರತೀಯ ಕರೆನ್ಸಿಯ ಮೇಲೆ ಲಕ್ಷ್ಮಿ ದೇವಿ ಮತ್ತು ಗಣೇಶನ ಚಿತ್ರಗಳನ್ನು ಚಿತ್ರಿಸುವಂತೆ ಸೂಚಿಸಿದ್ದಾರೆ. ಇದು ಆರ್ಥಿಕತೆ ಹೆಚ್ಚಿಸುವ ಒಂದು ಮಾರ್ಗವಾಗಿದೆ ಮತ್ತು ಇದು ಡಾಲರ್ ವಿರುದ್ಧ ರೂಪಾಯಿಯ ಕುಸಿತ ತಡೆಯಲು ಸಹಾಯ ಮಾಡುತ್ತದೆ ಎಂದು ಸೂಚಿಸಿದ್ದಾರೆ.
ಎಎಪಿ ಮುಖ್ಯಸ್ಥರ ಮೇಲೆ ಪಕ್ಷದ ಹಿರಿಯ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಜ್ರಿವಾಲ್ ತಮ್ಮ ಸರ್ಕಾರದ ದೋಷಗಳು ಮತ್ತು ಆಮ್ ಆದ್ಮಿ ಪಕ್ಷದ ಹಿಂದೂ ವಿರೋಧಿ ಮನಸ್ಥಿತಿಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ರಾಜಕೀಯ ನಾಟಕ ದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಹೇಳಿದೆ.
ಕೇಜ್ರಿವಾಲ್ ಅವರ ಬೂಟಾಟಿಕೆ ಎದ್ದು ಕಾಣುತ್ತಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ತಿಳಿಸಿದರು. ಪಕ್ಷದ ನಾಯಕ ಮನೋಜ್ ತಿವ್ರಿ, ಎಎಪಿ ಹಿಂದೂ ದೇವರು ಮತ್ತು ದೇವತೆಗಳನ್ನು ದುರುಪಯೋಗಪಡಿಸಿಕೊಂಡಿದೆ ಆದರೆ ಈಗ ಚುನಾವಣೆಗೆ ಮುನ್ನ ತಮ್ಮ ಮುಖವನ್ನು ಉಳಿಸಲು ಪ್ರಯತ್ನಿಸುತ್ತಿದೆ. ರಾಮಮಂದಿರಕ್ಕೆ ಆಕ್ಷೇಪ ವ್ಯಕ್ತಪಡಿಸಿ ದವರು ಹೊಸ ಮುಖವಾಡ ಹಾಕಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ದೆಹಲಿಯ ವಿಧಾನಸಭಾ ಚುನಾವಣೆಗೆ ಮುನ್ನ ದೂರದರ್ಶನದ ಸಂದರ್ಶನ ವೊಂದರಲ್ಲಿ ಕೇಜ್ರಿವಾಲ್ ಹನುಮಾನ್ ಚಾಲೀಸಾ ವನ್ನು ಪಠಿಸಿದಾಗ ಬಿಜೆಪಿ ಈ ಹಿಂದೆಯೂ ತೀವ್ರವಾಗಿ ಪ್ರತಿಕ್ರಿಯಿಸಿತ್ತು.