Wednesday, 11th December 2024

ಶೋಯೆಬ್ ಅಖ್ತರ್ ಭೇಟಿಯಾದ ಸಂಸದ ಶಶಿ ತರೂರ್

ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ರಾವಲ್ಪಿಂಡಿ ಎಕ್ಸ್ ಪ್ರೆಸ್ ಖ್ಯಾತಿಯ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಶೋಯೆಬ್ ಅಖ್ತರ್ ಅವರನ್ನು ಭೇಟಿಯಾಗಿದ್ದಾರೆ.
ಈ ಕುರಿತ ಫೋಟೋವೊಂದನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿರುವ ಶಶಿ ತರೂರ್, ದುಬೈ ಮೂಲಕ ದೆಹಲಿಗೆ ಹಿಂತಿರುಗುವಾಗ ಶೋಯೆಬ್ ಅಖ್ತರ್ ಹಲೋ ಎಂದು ಕೇಳಿ ಆಶ್ಚರ್ಯವಾಯಿತು ಎಂದಿದ್ದಾರೆ. ಎಂತಹ ಸ್ಮಾರ್ಟ್, ಯುವಕರ ಕಣ್ಮಣಿ ವೇಗದ ಬೌಲರ್! ಅವರಿಗೆ ನಮ್ಮ ದೇಶದಲ್ಲಿಯೂ ಸಾಕಷ್ಟು ಅಭಿಮಾನಿಗಳಿದ್ದಾರೆ.
ನನ್ನನ್ನು ಸ್ವಾಗತಿಸಲು ಬಂದ ಎಲ್ಲಾ ಭಾರತೀಯರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದರು. ಭಾರತ, ಪಾಕಿಸ್ತಾನ ಮತ್ತು ಕ್ರಿಕೆಟ್ ಬಗ್ಗೆ ಅವರೊಂದಿಗೆ ಉತ್ತಮ ಸಂಭಾಷಣೆ ನಡೆಯಿತು ಎಂಬುದಾಗಿ ಬರೆದುಕೊಂಡಿದ್ದಾರೆ.