Saturday, 12th October 2024

ದೆಹಲಿ ಕೋರ್ಟ್‌ ಆವರಣದಲ್ಲಿ ಶೂಟೌಟ್: ಗ್ಯಾಂಗ್’ಸ್ಟರ್‌ ಸಹಿತ ಮೂವರ ಸಾವು

ನವದೆಹಲಿ: ಬಂದೂಕುಧಾರಿಗಳು ಲಾಯರ್​ ವೇಷದಲ್ಲಿದ್ದು ದೆಹಲಿ ನ್ಯಾಯಾಲಯದಲ್ಲಿ ನಡೆಸಿದ ಗುಂಡಿನ ದಾಳಿ ನಡೆಸಿ ಗ್ಯಾಂಗ್​ಸ್ಟರ್​ ಸೇರಿ ಮೂವರ ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಅನೇಕ ಮಂದಿ ಗಾಯಗೊಂಡಿದ್ದಾರೆ.

ಗ್ಯಾಂಗ್​ಸ್ಟರ್​ ಜೀತೇಂದರ್​ ಗೊಗಿಯನ್ನು ಉತ್ತರ ದೆಹಲಿಯ ರೋಹಿಣಿ ಏರಿಯಾದ ನ್ಯಾಯಾಲಯ ಸಂಕೀರ್ಣದಲ್ಲಿ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾ ಗಿದೆ. ಆರೋಪಿಗಳು ಲಾಯರ್​ ವೇಷ ಧರಿಸಿ ಕೋರ್ಟ್​ ಆವರಣಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.

ಜೀತೇಂದರ್​ ನಟೋರಿಯಸ್​ ಗ್ಯಾಂಗ್​ಸ್ಟರ್​. ತಿಹಾರ್​ ಜೈಲಿನಲ್ಲಿದ್ದ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ವೇಳೆ ಎದುರಾಳಿ ‘ಟಿಲ್ಲು ಗ್ಯಾಂಗ್’ ಸದಸ್ಯರು ಲಾಯರ್​ ವೇಷದಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದಾರೆ.

ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿ ದಾಳಿ ನಡೆಸಿದ್ದು, ಟಿಲ್ಲು ಗ್ಯಾಂಗ್​ನ ಇಬ್ಬರು ಸದಸ್ಯರು ಮೃತರಾಗಿದ್ದಾರೆಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್​ ಆಸ್ತಾನಾ ಮಾಹಿತಿ ನೀಡಿದ್ದಾರೆ.

ಕೋರ್ಟ್​ ಆವರಣದಲ್ಲಿಯೇ ಗುಂಡಿನ ದಾಳಿ ನಡೆದಿದ್ದು, ಭದ್ರತಾ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇದುವರೆಗೂ ಎರಡು ಗ್ಯಾಂಗ್​ನಿಂದ 25ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದಾರೆ.  ಗೊಗಿಯನ್ನು ಕಳೆದ ವರ್ಷ ಮಾರ್ಚ್​ ನಲ್ಲಿ ಬಂಧಿಸಲಾಗಿತ್ತು. ಆತನನ್ನು ಕೋರ್ಟ್​ಗೆ ಹಾಜರುಪಡಿಸುವುದನ್ನೇ ಕಾದು ಕುಳಿತಿದ್ದ ಎದುರಾಳಿ ಗ್ಯಾಂಗ್​ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದೆ.