ಅಫ್ತಾಬ್ ಪೂನವಾಲಾ ತನ್ನ ಸ್ನೇಹಿತೆ ಶ್ರದ್ಧಾ ವಾಕರ್ನನ್ನು ಕೊಂದು ನಂತರ ಆಕೆಯ ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ, ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿ ಮೂರು ತಿಂಗಳ ಅವಧಿಯಲ್ಲಿ ತನ್ನ ಮನೆಯ ಸಮೀಪವಿರುವ ಛತ್ತರ್ಪುರ ಅರಣ್ಯದಲ್ಲಿ ವಿಲೇವಾರಿ ಮಾಡಿದ್ದನು.
ಪ್ರಕರಣ ಸಂಬಂಧ ಪೊಲೀಸರು 6,500 ಪುಟಗಳನ್ನು ಹೊಂದಿರುವ ಚಾರ್ಜ್ ಶೀಟ್ ಸಿಲ್ಲಿಸಿದ್ದು, 100 ಸಾಕ್ಷ್ಯಗಳನ್ನು ಒಳಗೊಂಡಿದೆ. ಪ್ರಸ್ತುತ ಇದನ್ನು ಕಾನೂನು ತಜ್ಞರು ಪರಿಶೀಲಿಸುತ್ತಿದ್ದಾರೆ.
ನ್ಯಾಯಾಲಯವು ಅಫ್ತಾಬ್ನ ನ್ಯಾಯಾಂಗ ಬಂಧನವನ್ನು ಫೆಬ್ರವರಿ 7 ರವರೆಗೆ ಎರಡು ವಾರಗಳವರೆಗೆ ವಿಸ್ತರಿಸಿದೆ. ಫೆಬ್ರವರಿ 7 ರಂದು ನ್ಯಾಯಾಲಯದ ಮುಂದೆ ದೈಹಿಕವಾಗಿ ಹಾಜರುಪಡಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿದೆ.