Saturday, 14th December 2024

Shweta Bachchan: ಟಿವಿ ಶೋನಲ್ಲಿ ಐಶ್ವರ್ಯಾ ರೈ ವ್ಯಕ್ತಿತ್ವ ತೆರೆದಿಟ್ಟ ಶ್ವೇತಾ ಬಚ್ಚನ್, ಜಯಾ ಬಚ್ಚನ್‌

Shweta Bachchan

ಐಶ್ವರ್ಯಾ ರೈಗೆ (Aishwarya Rai ) ಯಾವುದೇ ಸಲಹೆ ಅಗತ್ಯವಿಲ್ಲ. ಅವಳು ಪರಿಪೂರ್ಣಳು. ಅವಳು ತನ್ನ ನಿಜವಾದ ಮುಖವನ್ನೇ ತೋರಿಸುತ್ತಾಳೆ ಎಂದು ಶ್ವೇತಾ ಬಚ್ಚನ್ (Shweta Bachchan) ಮತ್ತು ಜಯಾ ಬಚ್ಚನ್ (Jaya Bachchan ) ಹೇಳಿದ್ದಾರೆ. ಅವರು ಕಾಫಿ ವಿತ್ ಕರಣ್‌ (Koffee With Karan) ಎರಡನೇ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral video) ಆಗಿದೆ.

ಕಾಫಿ ವಿತ್ ಕರಣ್‌ನಲ್ಲಿ ಎರಡನೇ ಸೀಸನ್‌ನಲ್ಲಿ ಕರಣ್ ಜೋಹರ್ ಅವರು ಶ್ವೇತಾ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಬಳಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈಗೆ ವೈವಾಹಿಕ ಜೀವನಕ್ಕೆ ಏನು ಸಲಹೆ ನೀಡಲು ಬಯಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅವರಿಬ್ಬರೂ ಐಶ್ವರ್ಯಾ ರೈಗೆ ಯಾವುದೇ ಸಲಹೆ ಅಗತ್ಯವಿಲ್ಲ ಎಂದಿದ್ದಾರೆ.

ಈ ಸರಣಿಯಲ್ಲಿ ಶ್ವೇತಾ ಬಚ್ಚನ್ ಮತ್ತು ಜಯಾ ಬಚ್ಚನ್ ಜೊತೆಗೆ ಹೇಮಾ ಮಾಲಿನಿ ಮತ್ತು ಅವರ ಮಗಳು ಇಶಾ ಡಿಯೋಲ್ ಕೂಡ ಪಾಲ್ಗೊಂಡಿದ್ದರು. ರಾಪಿಡ್ ಫೈರ್ ರೌಂಡ್ ನಲ್ಲಿ ಕರಣ್ ಜೋಹರ್ ಅವರು ಐಶ್ವರ್ಯಾ ಅವರಿಗೆ ಸಲಹೆ ನೀಡುವಂತೆ ಕೇಳಿದ್ದರು.

Shweta Bachchan

ಇದರ ವಿಡಿಯೋ ಈಗ ರೆಡ್ಡಿಟ್‌ನಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ ಶ್ವೇತಾ ಮತ್ತು ಜಯಾ ಇಬ್ಬರೂ ಐಶ್ವರ್ಯಾಗೆ ಯಾವುದೇ ಮದುವೆಯ ಸಲಹೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಐಶ್ವರ್ಯಾ ಪರಿಪೂರ್ಣಳು. ನಾವು ಅವಳಿಗೆ ಏನನ್ನೂ ಹೇಳಬೇಕಿಲ್ಲ ಎಂದು ಭಾವಿಸುತ್ತೇನೆ. ಅವಳು ಅಪಾರ ತಾಳ್ಮೆಯನ್ನು ಹೊಂದಿದ್ದಾಳೆ. ಅದು ಅವಳ ನಿಜವಾದ ಮುಖ. ಅವಳು ಚೆನ್ನಾಗಿಯೇ ಇದ್ದಾಳೆ. ಅವಳಿಗೆ ಯಾವುದೇ ಸಲಹೆ ಅಗತ್ಯವಿಲ್ಲ ಎಂದು ಶ್ವೇತಾ ತಿಳಿಸಿದ್ದಾರೆ.

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ 2007ರಲ್ಲಿ ವಿವಾಹವಾದರು. ಇವರಿಬ್ಬರು ಜೊತೆಯಾಗಿ ಧೈ ಅಕ್ಷರ್ ಪ್ರೇಮ್ ಕೆ, ಕುಚ್ ನಾ ಕಹೋ ಸಿನಿಮಾಗಳಲ್ಲಿ ಕೆಲಸ ಮಾಡಿದರು. 2005-2006ರಲ್ಲಿ ಉಮ್ರಾವ್ ಜಾನ್ ಚಿತ್ರೀಕರಣದ ಸಮಯದಲ್ಲಿ ಇವರಿಬ್ಬರು ಪ್ರೀತಿಸಲು ಪ್ರಾರಂಭಿಸಿದರು. ಬಳಿಕ 2007ರ ಏಪ್ರಿಲ್ 20ರಂದು ವಿವಾಹವಾದರು.

Samantha Ruth Prabhu: ವಿಚ್ಛೇದನ ಬಗ್ಗೆ ಸಚಿವೆಯ ಆಕ್ಷೇಪಾರ್ಹ ಹೇಳಿಕೆ; ಮತ್ತೊಮ್ಮೆ ಗಮನ ಸೆಳೆದ ಸಮಂತಾ ಸೋಷಿಯಲ್‌ ಮೀಡಿಯಾ ಪೋಸ್ಟ್‌

ಇವರಿಬ್ಬರ ಮದುವೆಯ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮಿತಾಬ್ ಬಚ್ಚನ್, ಅಮೆರಿಕದಲ್ಲಿ ಐಶ್ವರ್ಯಾಗೆ ಅಭಿಷೇಕ್ ಪ್ರಪೋಸ್ ಮಾಡಿದ್ದನ್ನು ಬಹಿರಂಗಪಡಿಸಿದರು. ನ್ಯೂಯಾರ್ಕ್‌ನಲ್ಲಿ ʼಗುರುʼ ಚಿತ್ರದ ಪ್ರಥಮ ಪ್ರದರ್ಶನದ ಅನಂತರ ಅಭಿಷೇಕ್ ನನಗೆ ಕರೆ ಮಾಡಿ, ಐಶ್ವರ್ಯಗೆ ಪ್ರಪೋಸ್ ಮಾಡಿರುವ ಸಂಗತಿ ಹೇಳಿದ್ದರು ಎಂಬ ಸಂಗತಿ ತಿಳಿಸಿದ್ದರು. ಅಭಿಷೇಕ್ ಮತ್ತು ಐಶ್ವರ್ಯಾ ಮದುವೆಯಾಗಿ 17 ವರ್ಷಗಳಾಗಿದ್ದು ಇವರಿಗೆ ಆರಾಧ್ಯ ಎಂಬ ಮಗಳಿದ್ದಾಳೆ.