ಶಾಸ್ತ್ರಿ ಅವರು ನ.24ರಂದು ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೆಲುಗು ವಿನ “ಸಿರಿವೆನ್ನೆಲ’, “ರುದ್ರವೀಣಾ’, “ಸ್ವರ್ಣ ಕಮಲಂ’ ಸೇರಿ ಅನೇಕ ಪ್ರಸಿದ್ಧ ಸಿನಿಮಾಗಳ ಹಾಡಿಗೆ ಅವರು ಸಾಹಿತ್ಯ ಬರೆದಿದ್ದರು. 3,000ಕ್ಕೂ ಅಧಿಕ ಹಾಡುಗಳಿಗೆ ಸಾಹಿತ್ಯ ನೀಡಿದ್ದರು.
ಶಾಸ್ತ್ರಿ ಮತ್ತು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜೋಡಿ ತೆಲುಗು ಸಂಗೀತ ಪ್ರಿಯರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಶಾಸ್ತ್ರಿ ಅವರಿಗೆ ಪದ್ಮಶ್ರೀ, ನಂದಿ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.