Saturday, 14th December 2024

ಬಿಜೆಪಿ ಸೇರ್ಪಡೆಯಾದ ಸಿಸಿರ್ ಅಧಿಕಾರಿ

ಕೋಲ್ಕತ್ತಾ: ದೀರ್ಘಕಾಲ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಸಿಸಿರ್ ಅಧಿಕಾರಿ ಬಳಿಕ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ರಾಗಿದ್ದರು. ಇದೀಗ ಅವರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಸಿಸಿರ್ ಅಧಿಕಾರಿ ಪುತ್ರ ಹಾಗೂ ತೃಣಮೂಲ ಕಾಂಗ್ರೆಸ್ ನ ಪ್ರಮುಖ ಮುಖಂಡರಾಗಿದ್ದ ಸುವೇಂದು ಅಧಿಕಾರಿ ಹಲವು ತಿಂಗಳು ಗಳ ಮುಂಚೆಯೇ ಬಿಜೆಪಿ ಸೇರಿದ್ದರು.

ಸಿಸಿರ್ ಅಧಿಕಾರಿ ಹಾಗೂ ಸುವೇಂದು ಅಧಿಕಾರಿ ಮೇದಿನಿಪುರ, ಬಂಕುರಾ ಮತ್ತು ಪುರುಲಿಯಾಗಳಲ್ಲಿ ಹೆಚ್ಚಿನ ಪ್ರಭಾವ ಹೊಂದಿ ದ್ದಾರೆ. ಸಿಸಿರ್ ಅಧಿಕಾರಿ 23 ವರ್ಷಗಳ ಕಾಲ ತೃಣಮೂಲ ಕಾಂಗ್ರೆಸ್ ನಲ್ಲಿ ಕಾರ್ಯ ನಿರ್ವಹಿಸಿದ್ದು, ಆರು ವರ್ಷಗಳ ಕಾಲ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಚಿವ ಸ್ಥಾನ ಹೊಂದಿದ್ದರು.