Wednesday, 11th December 2024

ತಮ್ಮನಿಗೆ ರಾಖಿ ಕಟ್ಟಿ ಕೊನೆಯುಸಿರೆಳೆದ ಅಕ್ಕ

ತೆಲಂಗಾಣ: ರಕ್ಷಾ ಬಂಧನದ ದಿನ ಆಸ್ಪತ್ರೆಯಲ್ಲಿ ತಮ್ಮನಿಗೆ ರಾಖಿ ಕಟ್ಟಿ ಅಕ್ಕ ಕೊನೆಯುಸಿರು ಎಳೆದ ಘಟನೆ ತೆಲಂಗಾಣದ ಮಹಬೂಬಾಬಾದ್ ನಲ್ಲಿ ನಡೆದಿದೆ.

ತೆಲಂಗಾಣದ ಮಹಬೂಬಾಬಾದ್ ಮೂಲದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಹೀಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುವ ಕೆಲವೇ ಕ್ಷಣಗಳ ಮೊದಲು ಬಾಲಕಿ ತನ್ನ ಸಹೋದರನ ಮಣಿಕಟ್ಟಿಗೆ ರಾಖಿ ಕಟ್ಟುವ ಮೂಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ವಾಳೆ.

ಪುರುಷರ ಗುಂಪಿನ ಕಿರುಕುಳ ಸಹಿಸಲಾಗದೆ, ತನ್ನ ಜೀವನ ಕೊನೆಗೊಳಿಸುವ ಪ್ರಯತ್ನದಲ್ಲಿ ಅವಳು ವಿಷ ಸೇವಿಸಿದಳು. ಆಕೆಯನ್ನು ಆಸ್ಪತ್ರೆಗೆ ಸಾಗಿಸ ಲಾಯಿತು. ಚಿಕಿತ್ಸೆ ಪಡೆದರೂ, ಅವರ ಸ್ಥಿತಿ ವೇಗವಾಗಿ ಹದಗೆಟ್ಟಿತು. ನರಸಿಂಹಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಕೆಗೆ ಕಿರುಕುಳ ನೀಡಿದ ಆರೋಪಿಗಳನ್ನು ಬಂಧಿಸಲಾಗಿದೆ.