Saturday, 14th December 2024

ಕೊಳೆಗೇರಿಯಲ್ಲಿ ಬೆಂಕಿ ದುರಂತ: ಸಹೋದರಿಯರ ಸಾವು

ಇಂದೋರ್: ಕಳೆದ ರಾತ್ರಿ ಕೊಳೆಗೇರಿಯಲ್ಲಿ ಬೆಂಕಿ ಕಾಣಿಸಿಕೊಂಡು ಸಹೋದರಿಯರು  ಹೃದಯ ವಿದ್ರಾವಕ ಮೃತಪಟ್ಟಿದ್ದಾರೆ.

ಕೊಳೆಗೇರಿಯೊಂದರಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಇತರ ಭಾಗ ಗಳಿಗೆ ವೇಗವಾಗಿ ಹರಡಿತು. ಮಾಹಿತಿ ಪಡೆದ ಅಗ್ನಿಶಾಮಕ ದಳ ಹಾಗೂ ರಾಜೇಂದ್ರ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದರಾದರೂ ಅಷ್ಟೊತ್ತಿ ಗಾಗಲೇ ಈ ದುರ್ಘಟನೆ ನಡೆದೇ ಹೋಗಿತ್ತು.

ಅವಘಡದಲ್ಲಿ ಮೊದಲ ಕೊಳೆಗೇರಿ ನಿವಾಸಿ ಸೋನು ಮೇಧಾ ಅವರ 6 ವರ್ಷದ ಮತ್ತು 4 ವರ್ಷದ ಹೆಣ್ಣು ಮಕ್ಕಳು ಇಬ್ಬರೂ ಸುಟ್ಟು ಕರಕಲಾಗಿದ್ದಾರೆ. ಅಲ್ಲಿದ್ದ ಜಾನುವಾರುಗಳು ಸಹ ಸಜೀವ ದಹನವಾಗಿವೆ.

ಅಗ್ನಿಶಾಮಕ ದಳದ ವಾಹನಗಳು ಕೊಳೆಗೇರಿಗೆ ಆಗಮಿಸಿ ಬೆಂಕಿ ನಂದಿಸಿದವು. ಈ ವೇಳೆ ಬಾಲಕಿಯರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮುಂದಿನ ತನಿಖೆ ನಡೆಸಲಾಗುವುದು ಎಂದು ಸಹಾಯಕ ಆಯುಕ್ತರು ತಿಳಿಸಿದ್ದಾರೆ.