Wednesday, 11th December 2024

ಆಮ್ಲಜನಕದ ಕೊರತೆ: ಅಮೃತಸರದ ಆಸ್ಪತ್ರೆಯಲ್ಲಿ ಆರು ಮಂದಿ ಸೋಂಕಿತರ ಸಾವು

ಚಂಡೀಘಡ: ಪಂಜಾಬ್ ರಾಜ್ಯದ ಅಮೃತಸರದಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಮ್ಲಜನಕದ ಕೊರತೆಯಿಂದ ಆರು ಮಂದಿ ರೋಗಿಗಳು ಮೃತಪಟ್ಟಿದ್ದಾರೆ. ಈ ಪೈಕಿ ಐವರು ಕೋವಿಡ್-19 ರೋಗಿಗಳಾಗಿದ್ದಾರೆ ಎಂದು ವರದಿ ತಿಳಿಸಿದೆ.

ಮೃತಪಟ್ಟವರಲ್ಲಿ ಇಬ್ಬರು ಗುರುದಾಸ್ ಪುರದವರಾಗಿದ್ದು, ಒಬ್ಬರು ತರಣ್ ಟಾರ್ನ್ ಗೆ ಸೇರಿದವರಾಗಿದ್ದಾರೆ.ಇವರೆಲ್ಲರೂ ಗಂಭೀರ ಸ್ಥಿತಿಯಲ್ಲಿ ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದರು. ಆಮ್ಲಜನಕ ಪೂರೈಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ನೆರವು ನೀಡಲಿಲ್ಲ ಎಂದು ನೀಲ್ ಕಾಂತ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹೇಳಿದ್ದಾರೆ.

ಆಮ್ಲಜನಕ ಕೊರತೆಯಿಂದ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ರೋಗಿಗಳು ಮೃತಪಟ್ಟ ನಂತರ ಐದು ಆಕ್ಸಿಜನ್ ಸಿಲಿಂಡರ್ ಗಳನ್ನು ಆಸ್ಪತ್ರೆಗೆ ಪೂರೈಸಲಾಗಿದೆ ಎಂದು ದೇವಗನ್ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ತಡೆಗಟ್ಟಲು ಆಮ್ಲಜನಕ ಘಟಕಗಳ ಹೊರಗೆ ಭಾರಿ ಪೊಲೀಸ್ ಪಡೆ ನಿಯೋಜಿಸ ಲಾಗಿದೆ ಎಂದು ದೇವಗನ್ ಆರೋಪಿಸಿದ್ದಾರೆ.