Tuesday, 17th September 2024

Sleeping Job: ಆರಾಮಾಗಿ ನಿದ್ದೆ ಮಾಡಿ, 10 ಲಕ್ಷ ರೂ. ಸಂಪಾದಿಸಿ; ಇದೂ ಒಂದು ಉದ್ಯೋಗ!

Sleeping Job

ಹೆಚ್ಚು ನಿದ್ದೆ ಮಾಡಿ ಹಣ ಸಂಪಾದಿಸಿ (Sleeping Job) ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಭಾರತದ ಪ್ರಮುಖ ಹೋಮ್ ಆಂಡ್ ಸ್ಲೀಪ್ ಸೊಲ್ಯೂಷನ್ ಬ್ರ್ಯಾಂಡ್ (home and sleep solutions brand) ವೇಕ್ ಫಿಟ್ (Wakefit) ಈಗ ಇಂತಹ ಒಂದು ಆಫರ್ ನೀಡಿದೆ. ದಿನಕ್ಕೆ 8- 9 ಗಂಟೆ ನಿದ್ರಿಸಿದವರಿಗೆ 10 ಲಕ್ಷ ರೂ. ನೀಡುವುದಾಗಿ ಈ ಕಂಪನಿ ಘೋಷಿಸಿದೆ.

ಸ್ಲೀಪ್ ಇಂಟರ್ನ್ ಕಾರ್ಯಕ್ರಮ ತರಬೇತಿ ಅಲ್ಲ. ವಿಶ್ರಾಂತಿಯನ್ನು ಗೌರವಿಸುವ ಕಂಪನಿಯನ್ನು ಸೇರಲು ಒಂದು ಅವಕಾಶ. ಹೀಗಾಗಿ ಆರಾಮದಾಯಕವಾದ ಉದ್ಯೋಗ ಮಾಡಲು ಸಿದ್ಧರಿದ್ದರೆ ಈ ಆಫರ್ ಅನ್ನು ಒಪ್ಪಿಕೊಳ್ಳಬಹುದು. ಪ್ರೊಫೆಷನಲ್ ಸ್ಲೀಪ್ ಇಂಟರ್ನ್ ಪ್ರೋಗ್ರಾಂ ನಿದ್ರೆಯ ಬಗ್ಗೆ ಉತ್ಸುಕರಾಗಿರುವವರಿಗೆ ಮತ್ತು ವಿಶ್ರಾಂತಿ ನೀಡುವ ಕಂಪನಿಗೆ ಸೇರಲು ಉತ್ಸುಕರಾಗಿರುವವರಿಗೆ ಇದೊಂದು ಅವಕಾಶವನ್ನು ನೀಡುತ್ತದೆ.

ಕೆಲಸದ ವಿವರ ಹೀಗಿದೆ

ಕಂಪನಿಯು ಸಾಮಾಜಿಕ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್‌ನಲ್ಲಿ ವಿವರವಾದ ಉದ್ಯೋಗ ವಿವರಣೆಯನ್ನು ಹಂಚಿಕೊಂಡಿದೆ.

ಮಾಡಬೇಕಾದ ಕೆಲಸ: ವೃತ್ತಿಪರ ಸ್ಲೀಪ್ ಇಂಟರ್ನ್. ಕೆಲಸ ಮಾಡಬೇಕಿರುವ ಸ್ಥಳ: ಹಾಸಿಗೆಯಿಂದ ಕೆಲಸ ಮಾಡುವುದು! ಅವಧಿ 2 ತಿಂಗಳುಗಳು. 1 ಲಕ್ಷದಿಂದ 10 ಲಕ್ಷ ರೂ. ವರೆಗೆ ಸ್ಟೈಫಂಡ್ ನೀಡಲಾಗುತ್ತದೆ.

ಜವಾಬ್ದಾರಿ ಏನು?

ಪ್ರತಿ ರಾತ್ರಿ 8ರಿಂದ 9 ಗಂಟೆಗಳ ಕಾಲ ಶ್ರದ್ಧೆಯಿಂದ ಮತ್ತು ನಿಯಮಿತವಾಗಿ ನಿದ್ರಿಸುವುದು, ಹಗಲಿನಲ್ಲಿ 20 ನಿಮಿಷಗಳ ವಿಶ್ರಾಂತಿಗೆ ಅವಕಾಶ, ಉಚಿತ ಹಾಸಿಗೆಯನ್ನು ಒದಗಿಸಿದ ವೇಕ್‌ಫಿಟ್‌ನಲ್ಲಿ ಪ್ರತಿ ರಾತ್ರಿ ನಿರ್ದಿಷ್ಟ (ಹಾಸಿಗೆ) ಸಮಯವನ್ನು ತೋರಿಸಲಾಗುತ್ತದೆ. ಸಾಂದರ್ಭಿಕವಾಗಿ ವಾರಾಂತ್ಯದಲ್ಲಿ ಮಲಗುವ ಸಮಯವನ್ನು ವಿಸ್ತರಿಸಬೇಕಾಗಬಹುದು, ‘ಸ್ಲೀಪ್ ಚಾಂಪಿಯನ್’ ಆಗಿ ಬಡ್ತಿ ಪಡೆಯುವ ಸಾಧ್ಯತೆಗಳಿಗೆ ಅನುಭವಿ ‘ಸ್ಲೀಪ್ ಮೆಂಟರ್’ಗಳಿಂದ ನಡೆಸುವ ಕಾರ್ಯಾಗಾರಗಳಿಗೆ ಹಾಜರಾಗಬೇಕು. ನಿದ್ದೆ ಕುರಿತ ವೈಜ್ಞಾನಿಕ ಅಧ್ಯಯನಕ್ಕಾಗಿ ಈ ಕಂಪನಿ ಈ ಯೋಜನೆ ಆಯೋಜಿಸಿದೆ.

ಏನಿದೆ ನಿಯಮ?

ಪ್ರತಿ ರಾತ್ರಿ ಒಂದೇ ಸಮಯದಲ್ಲಿ ಮಲಗುವುದು, ದೈನಂದಿನ ಜೀವನ ಚಟುವಟಿಕೆಗಳಿಗೆ ಆದ್ಯತೆ, ಮಲಗುವ ಸಮಯದಲ್ಲಿ ಕರೆಗಳು, ಕಾರ್ಯಕ್ರಮಗಳನ್ನು ತಪ್ಪಿಸಲೇಬೇಕು. ವೇಕ್‌ಫಿಟ್‌ನ ಅತ್ಯಾಧುನಿಕ ಹಾಸಿಗೆಗಳ ಮೇಲೆ ಮಲಗುವಾಗ ಎಲ್ಲಾ ಮಾನಸಿಕ ಮತ್ತು ದೈಹಿಕ ಒತ್ತಡಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಬೇಕು, ನಿದ್ರೆ ಸಮಯ ಮರು ಹೊಂದಾಣಿಕೆಗೆ ಅವಕಾಶವಿಲ್ಲ.

ಅರ್ಹತೆ ಏನು?

22 ವಯಸ್ಸಿನ ಮೇಲ್ಪಟ್ಟವರು ಈ ಉದ್ಯೋಗ ಮಾಡಬಹುದು. ಯಾವುದೇ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಹಣ ಸಿಗೋದೆಷ್ಟು?

ಆಯ್ಕೆಯಾದ ಸ್ಲೀಪ್ ಇಂಟರ್ನ್‌ಗೆ 1 ಲಕ್ಷ ರೂ. ನೀಡಲಾಗುತ್ತದೆ. ವರ್ಷದ “ಸ್ಲೀಪ್ ಚಾಂಪಿಯನ್” ಆಗಿ ಬಡ್ತಿ ಪಡೆದ ಸ್ಲೀಪ್ ಇಂಟರ್ನ್‌ಗೆ 10 ಲಕ್ಷ ರೂ.ವರೆಗೆ ಪಾವತಿಸಲಾಗುತ್ತದೆ.

Job Guide: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿದೆ 39 ಹುದ್ದೆ; ಇಂದೇ ಅಪ್ಲೈ ಮಾಡಿ

ನೋಂದಣಿ

ವೇಕ್‌ಫಿಟ್‌ನಲ್ಲಿ ವೃತ್ತಿಪರ ಸ್ಲೀಪ್ ಇಂಟರ್ನ್ ಆಗಲು ಆಸಕ್ತಿ ಇದ್ದವರು ಲಿಂಕ್ಡ್‌ಇನ್ ಪುಟದಲ್ಲಿ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ನೋಡಿ ಬಳಿಕ ನೋಂದಣಿ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *